ಪ್ರತಿ ಮನೆಯಲ್ಲೂ ಪ್ರತ್ಯೇಕ ಗ್ರಂಥಾಲಯ ಆಗಬೇಕು

ಬೆಳಗಾವಿ ರಾಮತೀರ್ಥ ನಗರದಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಶಿ.ಗು.ಕುಸಗಲ್ಲರ ಆಲದ ಮರ ಕೃತಿಯನ್ನು ಡಾ.ಮಾನಸ ಬಿಡುಗಡೆಗೊಳಿಸಿದರು. ಶಿ.ಗು.ಕುಸುಗಲ್ಲ, ಡಾ.ಯಲ್ಲಪ್ಪ ಹಿಮ್ಮಡಿ, ನಿರ್ಮಲಾ ಬಟ್ಟಲ, ಜಿ.ರಾಮಯ್ಯ ಇತರರಿದ್ದರು.
ಬೆಳಗಾವಿ ರಾಮತೀರ್ಥ ನಗರದಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮದಲ್ಲಿ ಶಿ.ಗು.ಕುಸಗಲ್ಲರ ಆಲದ ಮರ ಕೃತಿಯನ್ನು ಡಾ.ಮಾನಸ ಬಿಡುಗಡೆಗೊಳಿಸಿದರು. ಶಿ.ಗು.ಕುಸುಗಲ್ಲ, ಡಾ.ಯಲ್ಲಪ್ಪ ಹಿಮ್ಮಡಿ, ನಿರ್ಮಲಾ ಬಟ್ಟಲ, ಜಿ.ರಾಮಯ್ಯ ಇತರರಿದ್ದರು.
Published on

ಬೆಳಗಾವಿ :

ಪುಸ್ತಕಗಳು ಜ್ಞಾನದ ಕಟ್ಟು, ಅರಿವಿನ ಹೊತ್ತಿಗೆಗಳು. ಹೀಗಾಗಿ, ಗ್ರಂಥಾಲಯ ಹೊಂದಿದ ಮನೆಗೆ ಹೆಚ್ಚಿನ ಗೌರವ ಬರುತ್ತದೆ. ಪ್ರತಿ ಮನೆಯಲ್ಲಿ ಪೂಜಾ ಕೊಠಡಿಯಂತೆಯೇ ಪ್ರತ್ಯೇಕ ಗ್ರಂಥಾಲಯ ಕೊಠಡಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆರಂಭಗೊಂಡಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.

ರಾಮತೀರ್ಥ ನಗರದ ಸಾಹಿತಿ ಶಿವಯೋಗಿ ಕುಸುಗಲ್ಲ ನಿವಾಸದಲ್ಲಿ ಭಾನುವಾರ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಹಮ್ಮಿಕೊಂಡಿದ್ದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರರು ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿ ದೇಹದ ಆರೋಗ್ಯಕ್ಕಾಗಿ ಆಹಾರ ಹಾಗೂ ಮತ್ತೊಂದು ರೂಪಾಯಿ ಮಾನಸಿಕ ಪರಿವರ್ತನೆಯ ಜ್ಞಾನಕ್ಕಾಗಿ ಪುಸ್ತಕ ಕೊಳ್ಳಲು ಬಳಸಿ ಎಂದು ಹೇಳಿದ್ದರು. ಇದನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಪುಸ್ತಕ ಓದುವ ಅಭಿರುಚಿ ಹೆಚ್ಚಿಸಲು ಪ್ರತಿ ಮನೆಯಲ್ಲೂ ಗ್ರಂಥಾಲಯ ಸ್ಥಾಪಿಸುವ ಯೋಜನೆಗೆ ಪ್ರಾಧಿಕಾರ ಮುಂದಾಗಿದೆ ಎಂದರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಯಲ್ಲಪ್ಪ ಹಿಮ್ಮಡಿ ಅಧ್ಯಕ್ಷತೆ ವಹಿಸಿದ್ದರು. ವಿಮರ್ಶಕಿ ಡಾ.ನಿರ್ಮಲಾ ಬಟ್ಟಲ, ಪ್ರಾಧಿಕಾರದ ಸದಸ್ಯ ಡಾ.ಕುಶಾಲ ಬರಗೂರು, ಗ್ರಂಥಾಲಯ ಇಲಾಖೆಯ ಉಪನಿರ್ದೇಶಕ ಜಿ.ರಾಮಯ್ಯ, ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಜಗದೀಶ ಹೊಸಮನಿ, ಬಿ.ವೈ.ನಾಯಕ, ಸ.ರಾ.ಸುಳಕುಡೆ, ದೀಪ್ತಿ ಎಲಿಗಾರ, ವೀರಣ್ಣ ಕೆಂಚಕ್ಕನವರ, ಬಸಪ್ಪ ನಾಯ್ಕರ, ಶಿವಾನಂದ ಮಸಳಿ, ಅಕ್ಕಮಹಾದೇವಿ ತೆಗ್ಗಿ, ಹೇಮಾ ಸೋನಳ್ಳಿ, ದೇಮಣ್ಣ ಸೊಗಲದ, ಸಾಂವಕ್ಕ ಸೊಗಲದ ಇತರರಿದ್ದರು.

ಐಶ್ವರ್ಯ ಕಾಂಬಳೆ ನಾಡಗೀತೆ ಹಾಡಿದರು. ಡಾ.ಸಂತೋಷ ನಾಯಿಕ ಸ್ವಾಗತಿಸಿದರು, ವಿನಾಯಕ ನಂದಿ ನಿರೂಪಿಸಿದರು. ಡಾ.ಕವಿತಾ ಕುಸುಗಲ್ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net