ಆಧ್ಯಾತ್ಮಿಕ ಜೀವನದಿಂದ ಶಾಶ್ವತ ಕೀರ್ತಿ

ಯಮಕನಮರಡಿಯಲ್ಲಿ ಲಿಂ.ಗುರುಸಿದ್ಧ ಸ್ವಾಮೀಜಿ 32ನೇ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಡಾ.ಆನಂದ ಮಹಾರಾಜ ಗೋಸಾವಿ ಮಾತನಾಡಿದರು. ರಾಚೋಟಿ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಇತರರಿದ್ದರು.
ಯಮಕನಮರಡಿಯಲ್ಲಿ ಲಿಂ.ಗುರುಸಿದ್ಧ ಸ್ವಾಮೀಜಿ 32ನೇ ಸ್ಮರಣೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಡಾ.ಆನಂದ ಮಹಾರಾಜ ಗೋಸಾವಿ ಮಾತನಾಡಿದರು. ರಾಚೋಟಿ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ ಇತರರಿದ್ದರು.
Published on
ಉಳ್ಳಾಗಡ್ಡಿ-ಖಾನಾಪುರ: ಆಧ್ಯಾತ್ಮಿಕ ಜೀವನ ಮನುಷ್ಯನಿಗೆ ಶಾಶ್ವತ ಕೀರ್ತಿ ತರುತ್ತದೆ. ಆ ದಿಸೆಯಲ್ಲಿ ಲಿಂಗೈಕ್ಯ ಗುರುಸಿದ್ಧ ಸ್ವಾಮೀಜಿ ಆಧ್ಯಾತ್ಮಿಕ ಚೇತನರಾಗಿ ಇಂದಿಗೂ ಅಜರಾಮರರಾಗಿ ಜನಮಾನಸದಲ್ಲಿದ್ದಾರೆ ಎಂದು ಹತ್ತರಗಿಯ ಹರಿಮಂದಿರದ ಡಾ.ಆನಂದ ಮಹಾರಾಜ ಗೋಸಾವಿ ಹೇಳಿದರು.
ಯಮಕನಮರಡಿಯ ಹುಣಸಿಕೊಳ್ಳಮಠದಲ್ಲಿ ಲಿಂ.ಗುರುಸಿದ್ಧ ಸ್ವಾಮೀಜಿ 32ನೇ ಸ್ಮರಣೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣರ ವಚನ ಸಂದೇಶ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೀಠಾಧಿಪತಿ ರಾಚೋಟಿ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿದ್ಧೇಶ್ವರ ಸ್ವಾಮೀಜಿ ಮಾತನಾಡಿದರು. ಉತ್ತರಾಧಿಕಾರಿ ಸಿದ್ಧಬಸವ ದೇವರು ಅಲ್ಲಮಪ್ರಭುಗಳ ಜೀವನ, ಚಂದ್ರೋದಯ ಕೃತಿ ಕುರಿತು ಮಾತನಾಡಿದರು.ಗಿರೀಶ ಮಿಶ್ರಕೋಟಿ, ಮಹಾಲಿಂಗ ಕುಂಬಾರ, ದುಂಡಯ್ಯ ಮಠಪತಿ, ಈರಣ್ಣ ಪಾವಟೆ, ಎಸ್.ಎಂ.ಶಿರೂರ, ಪ್ರಕಾಶ ಹೊಸಮನಿ, ಲಕ್ಷ್ಮಣ ಪೂಜಾರಿ, ಪಿ.ಬಿ.ಅವಲಕ್ಕಿ ಇತರರಿದ್ದರು. ಎಸ್.ಆರ್.ತಬರಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net