ಕಾರ್ಮಿಕರಿಗೆ ಇಎಸ್‌ಐ ಸೇವೆ ಮರೀಚಿಕೆ

ಬೆಳಗಾವಿ ಚನ್ನಮ್ಮ ವೃತ್ತದಲ್ಲಿನ ಇಎಸ್‌ಐ ಚಿಕಿತ್ಸಾಲಯದಲ್ಲಿ ವೈದ್ಯರ ತಪಾಸಣೆಗಾಗಿ ಕಾಯುತ್ತಿರುವ ಜನ.
ಬೆಳಗಾವಿ ಚನ್ನಮ್ಮ ವೃತ್ತದಲ್ಲಿನ ಇಎಸ್‌ಐ ಚಿಕಿತ್ಸಾಲಯದಲ್ಲಿ ವೈದ್ಯರ ತಪಾಸಣೆಗಾಗಿ ಕಾಯುತ್ತಿರುವ ಜನ.
Published on
>ಡಿ.ವಿ.ಕಮ್ಮಾರ ಬೆಳಗಾವಿ
ಕಾರ್ಮಿಕರ ಪಾಲಿಗೆ ವರವಾಗಬೇಕಿದ್ದ ಜಿಲ್ಲೆಯ ಇಎಸ್‌ಐ ಚಿಕಿತ್ಸಾಲಯ ಇದ್ದೂ ಇಲ್ಲದಂತಾಗಿವೆ. ವೈದ್ಯರ ಕೊರತೆಯಿಂದ ಹತ್ತು ನಿಮಿಷದ ಕೆಲಸಕ್ಕೆ ಕನಿಷ್ಠ 3 ಗಂಟೆ ಕಾಯಬೇಕಿದೆ. ಇದರಿಂದ ಬಡ ಕಾರ್ಮಿಕರಿಗೆ ತುರ್ತು ಮತ್ತು ಗುಣಮಟ್ಟದ ಚಿಕಿತ್ಸೆ ಗಗನಕುಸುಮವಾಗಿದೆ.
ಅಶೋಕ ನಗರದಲ್ಲಿರುವ ಮುಖ್ಯ ಆಸ್ಪತ್ರೆಯನ್ನು ತೆರವುಗೊಳಿಸಿ, ಹೊಸ ಕಟ್ಟಡ ನಿರ್ಮಿಸುತ್ತಿರುವುದರಿಂದ ಇಲ್ಲಿನ ಬಹುತೇಕ ವಿಭಾಗಗಳು ಬಂದ್ ಆಗಿವೆ. ಇದರಿಂದ ಜಿಲ್ಲೆಯ ಇನ್ನುಳಿದ 8 ಇಎಸ್‌ಐ ಚಿಕಿತ್ಸಾಲಯಗಳ ಮೇಲಿನ ಹೊರೆಹೆಚ್ಚಿಸಿದೆ. ನಿತ್ಯ ಒಂದೊಂದು
ಚಿಕಿತ್ಸಾಲಯಕ್ಕೆ 200ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಿದ್ದು, ಇವರನ್ನು ತಪಾಸಿಸಲು ಒಬ್ಬರೇ ವೈದ್ಯರಿದ್ದಾರೆ. ಇದರ ಹೊರತಾಗಿ ಇಎಸ್‌ಐ ಯೋಜನೆಗೆ ಸಂಬಂಧಿಸಿದ ಇತರ ಕೆಲಸಗಳನ್ನೂ ಇವರೇ ನಿರ್ವಹಿಸಬೇಕಿದೆ. ಹೀಗಾಗಿ, ವೈದ್ಯರು ಒತ್ತಡದಲ್ಲಿದ್ದಾರೆ.

ಎಲ್ಲಿವೆಚಿಕಿತ್ಸಾಲಯ?

ಬೆಳಗಾವಿ ನಗರ :

ಚನ್ನಮ್ಮ ವೃತ್ತ, ಯಮನಾಪುರ, ಪೀರನವಾಡಿ, ಬಸವೇಶ್ವರವೃತ್ತ(ಶಹಾಪುರ), ಉದ್ಯಮಬಾಗ

ಗ್ರಾಮೀಣ ಭಾಗ

ಗೋಕಾಕಕೊಣ್ಣೂರನಿಪ್ಪಾಣಿ

ಬೆಳಗಾವಿ ನಗರದಲ್ಲಿ 5 ಹಾಗೂ ಗ್ರಾಮೀಣ ಭಾಗದಲ್ಲಿ 3 ಚಿಕಿತ್ಸಾಲಯಗಳಿವೆ. ಇವುಗಳಿಗೆ ಸರ್ಕಾರದ ಮಂಜೂರಾದ ವೈದ್ಯರ ಸಂಖ್ಯೆ 19. ಇರುವುದು ಕೇವಲ ನಾಲ್ವರು ಕಾಯಂ ವೈದ್ಯರು. ಇಬ್ಬರನ್ನು ಗುತ್ತಿಗೆ ಆಧಾರದ ಮೇಲೆ, ಒಬ್ಬರನ್ನು ಬೇರೆ ಇಲಾಖೆಯಿಂದ ನಿಯೋಜನೆ ಮೇಲೆ ನೇಮಿಸಲಾಗಿದೆ. ನಿಪ್ಪಾಣಿ ಮತ್ತು ಕೊಣ್ಣೂರ (ಪ್ರಭಾರ) ಚಿಕಿತ್ಸಾಲಯಗಳ ನಡುವೆ ಒಬ್ಬರೇ ವೈದ್ಯರು ಓಡಾಡಬೇಕಿದ್ದು, ನಾಲ್ವರು ವೈದ್ಯರು ನಿಭಾಯಿಸಬೇಕಿರುವ ಹೊರರೋಗಿಗಳನ್ನು ಒಬ್ಬರೇ ವೈದ್ಯರು ನಿಭಾಯಿಸಲು ಪರದಾಡುವಂತಾಗಿದೆ.
ಒಬ್ಬರಿಂದ ಹಲವು ಕೆಲಸ:
ಚಿಕಿತ್ಸಾಲಯಗಳಲ್ಲಿರುವ ಏಕೈಕ ವೈದ್ಯರು, ದಿನವೊಂದಕ್ಕೆ ಕನಿಷ್ಠ 200 ಹೊರರೋಗಿಗಳನ್ನು ತಪಾಸಿಸುವ ಜತೆಗೆ ವಿಮೆ ಮರುಪಾವತಿಗೆ ಸಂಬಂಧಿಸಿದ ದಾಖಲೆ ಪರಿಶೀಲಿಸಿ, ಪ್ರಮಾಣೀಕರಿಸಬೇಕಿದೆ. ಇದರ ಜತೆಗೆ ಆಗಾಗ ನಡೆಯುವ ಸಭೆಗಳು, ಸರ್ಕಾರದ ಬೇರೆ ಬೇರೆ ಯೋಜನೆಗಳ ಕೆಲಸಗಳನ್ನು ನಿರ್ವಹಿಸಬೇಕಿದೆ. ವೈದ್ಯರ ಕೊಠಡಿ ಎದುರು ಎದ್ದುಹೋಗಲು ಆಗದಷ್ಟು ಜನ ಜಮಾಯಿಸಿರುತ್ತಾರೆ. ಶುಶ್ರೂಷಾಧಿಕಾರಿ, ಔಷಧಾಲಯ ಅಧಿಕಾರಿ, ಫಾರ್ಮಸಿಸ್ಟ್ ಹಾಗೂ ಪ್ರಥಮ, ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳೂ ಕೆಲವೆಡೆ ಖಾಲಿ ಇವೆ. ಹೀಗಾಗಿ, ಚಿಕಿತ್ಸಾಲಯ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.

ಈಡೇರದ ಆರೋಗ್ಯ ಸುರಕ್ಷತೆ ಆಶಯನೌಕರರ ರಾಜ್ಯ ವಿಮೆ (ಇಎಸ್‌ಐ) ಕಾರ್ಮಿಕರ ರಾಜ್ಯ ವಿಮಾ ಕಾಯ್ದೆಯಡಿಕಾರ್ಯನಿರ್ವಹಿಸುತ್ತದೆ. ಇದರ ಧ್ಯೇಯ ಕಾರ್ಮಿಕರಿಗೆ ಹಾಗೂ ಕುಟುಂಬಕ್ಕೆ ಆರೋಗ್ಯಸುರಕ್ಷತೆ ಒದಗಿಸುವುದಾಗಿದೆ. ಜಿಲ್ಲೆಯಲ್ಲಿ ಮೂಲ ಉದ್ದೇಶ ಈಡೇರಿಕೆಗೆ ಬೇಕಾದಮಾನವ ಸಂಪನ್ಮೂಲವೇ ಸರಿಯಾಗಿಲ್ಲ. ಇದರಿಂದ ಕಾರ್ಮಿಕರಿಗೆ ಆರೋಗ್ಯದಹಕ್ಕು ಸರಿಯಾಗಿ ಸಿಗುತ್ತಿಲ್ಲ. ಸಣ್ಣಪುಟ್ಟ ಕೆಲಸಕ್ಕೆ ಇಡೀ ದಿನ ಕಾಯಬೇಕಿದೆ. ಮೊದಲುಕೆಲಸದ ಸಮಯದಲ್ಲಿ ಒಂದು ಗಂಟೆ ಬಿಡುವು ಮಾಡಿಕೊಂಡು ಚಿಕಿತ್ಸಾಲಯಗಳಿಗೆಹೋಗಿಬರುತ್ತಿದ್ದರು. ಈಗ ಹತ್ತು ನಿಮಿಷದ ಕೆಲಸಕ್ಕೆ ಒಂದಿಡೀ ದಿನ ಕಾಯಬೇಕಿದ್ದು, ರಜೆಹಾಕಬೇಕಾದ ಅನಿವಾರ್ಯತೆ ಇದೆ.

"

ಯಮನಾಪುರ, ಗೋಕಾಕ, ಕೊಣ್ಣೂರ, ಉದ್ಯಮಬಾಗ ಚಿಕಿತ್ಸಾಲಯಗಳಿಗೆಕಾಯಂ ವೈದ್ಯರ ನೇಮಕಾತಿಗೆ ಶೀಘ್ರವೇ ಆದೇಶ ಬರಲಿದೆ. ಉಳಿದೆಡೆಹಂತಹಂತವಾಗಿ ನೇಮಕ ಮಾಡಿಕೊಳ್ಳಲಾಗುವುದು. ಗುತ್ತಿಗೆ ಮತ್ತು ಬೇರೆಇಲಾಖೆಗಳಿಂದ ವೈದ್ಯರನ್ನು ನಿಯೋಜಿಸಿಕೊಂಡು ಸೇವೆ ಒದಗಿಸುತ್ತಿದ್ದೇವೆ.

"

ಸರ್ಕಾರದ ಆರೋಗ್ಯ ಸೇವೆಯನ್ನು ಸರಿಯಾದ ಸಮಯಕ್ಕೆಪಡೆಯಲಾಗುತ್ತಿಲ್ಲ. ಸಾಕಷ್ಟು ಸಲ ಕೇಳಿಕೊಂಡರೂ ವೈದ್ಯರನೇಮಕವಾಗಿಲ್ಲ. ದೊಡ್ಡ ಜಿಲ್ಲೆಯಾಗಿರುವುದರಿಂದ ಕಾರ್ಮಿಕರಸಂಖ್ಯೆ ಹೆಚ್ಚಿದೆ. ಇದಕ್ಕೆ ತಕ್ಕಂತೆ ಇಎಸ್‌ಐ ಆರೋಗ್ಯ ಸೇವೆಸಿಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net