ರಾಸಾಯನಿಕ ಗೊಬ್ಬರದಿಂದ ಪರಿಸರ ನಾಶ

ಚಿಕ್ಕೋಡಿ ಪಟ್ಟಣದ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸೆಮಿನಾರ್ ಜರುಗಿತು. ಗೌರಿಶಂಕರ ಕರೋಶಿ, ಡಾ.ಬಿ.ಜಿ.ಕುಲಕರ್ಣಿ, ಡಾ.ಎಂ.ಟಿ.ಕುರಣಿ, ಎನ್.ಎಸ್.ಹಿರೇಮಠ ಇತರರಿದ್ದರು.
ಚಿಕ್ಕೋಡಿ ಪಟ್ಟಣದ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸೆಮಿನಾರ್ ಜರುಗಿತು. ಗೌರಿಶಂಕರ ಕರೋಶಿ, ಡಾ.ಬಿ.ಜಿ.ಕುಲಕರ್ಣಿ, ಡಾ.ಎಂ.ಟಿ.ಕುರಣಿ, ಎನ್.ಎಸ್.ಹಿರೇಮಠ ಇತರರಿದ್ದರು.
Published on
ಚಿಕ್ಕೋಡಿ: ಕೃಷಿ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಆರಂಭವಾದ ರಾಸಾಯನಿಕ ಬಳಕೆ ಇಂದು ಪರಿಸರ ಮತ್ತು ಆರೋಗ್ಯ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ರಾಸಾಯನಿಕ ಗೊಬ್ಬರ, ಕೀಟನಾಶಕಗಳ ಅತಿಯಾದ ಬಳಕೆಯಿಂದ ಕೃಷಿಯ ಸ್ವಾಭಾವಿಕ ಸಮತೋಲನ ಹದಗೆಟ್ಟಿದ್ದು, ಇದರಿಂದ ಹೊರಬರಲು ಸಾವಯವ ಕೃಷಿಯಿಂದ ಸಾಧ್ಯ ಎಂದು ಸಾವಯವ ಕೃಷಿಕ ಗೌರಿಶಂಕರ ಕರೋಶಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಬಸವಪ್ರಭು ಕೋರೆ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ಕೃಷಿಯಲ್ಲಿ ರಾಸಾಯನಿಕರಣದ ಪರಿಣಾಮ ಮತ್ತು ಪರಿಹಾರಗಳು ವಿಷಯದ ಕುರಿತು ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸೆಮಿನಾರ್‌ನಲ್ಲಿ ಮಾತನಾಡಿದರು.
ರಾಸಾಯನಿಕ ಗೊಬ್ಬರ ಬಳಕೆಯಿಂದ ಜೀವ ವೈವಿಧ್ಯ, ಪರಿಸರ ಮಾಲಿನ್ಯ, ಬೆಳೆ ಉತ್ಪಾದನೆ
ಮೇಲೆ ದೀರ್ಘ ಪರಿಣಾಮ ಬೀರಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಿಂದ ಹೊರಬರಲು ಜೈವಿಕ ಕೃಷಿ, ಮಣ್ಣು ಪರೀಕ್ಷೆ ಮತ್ತು ಸಮತೋಲಿತ ಗೊಬ್ಬರ ಬಳಕೆ, ರೈತರಿಗೆ ಜಾಗೃತಿ ಮತ್ತು ತರಬೇತಿ ನೀಡಬೇಕು. ಆಗ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದರು.
ನಿವೃತ್ತ ಪ್ರಾಚಾರ್ಯ ಡಾ.ಎಂ.ಟಿ.ಕುರಣಿ ಮಾತನಾಡಿ, ಕೃಷಿ ರಾಸಾಯನಿಕರಣ ತಾತ್ಕಾಲಿಕವಾಗಿ ಉತ್ಪಾದನೆ ಹೆಚ್ಚಿಸಿದರೂ, ದೀರ್ಘಾವಧಿಯಲ್ಲಿ ಮಣ್ಣು, ಪರಿಸರ ಮತ್ತು ಮಾನವ ಆರೋಗ್ಯಕ್ಕೆ ಗಂಭೀರ ಹಾನಿ ತರುತ್ತದೆ. ಪರಿಸರ ಸ್ನೇಹಿ ಮತ್ತು ಜೈವಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಆಡಳಿತ ಮಂಡಳಿ ಸದಸ್ಯ ಮಹೇಶ ಭಾತೆ ಮಾತನಾಡಿ, ಇಂದಿನ ಶಿಕ್ಷಣ ಪದ್ಧತಿಯಲ್ಲಿ ಸಮಗ್ರವಾಗಿ ಆಧುನಿಕತೆಯ ತಂತ್ರಜ್ಞಾನದ ಮೂಲಕ ಸಾವಯವ ಕೃಷಿಗೆ ಉತ್ತೇಜನ ನೀಡುವ ಪಠ್ಯಕ್ರಮದ ಮೂಲಕ ಯುವಕರು ಹೆಚ್ಚಿನ ಮಟ್ಟದಲ್ಲಿ ಕೃಷಿಯಲ್ಲಿ ತೊಡಗಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ.ಬಿ.ಜಿ. ಕುಲಕರ್ಣಿ ಮಾತನಾಡಿದರು. ಸಿ.ಬಿ.ಕೋರೆ ಸಕ್ಕರೆ ಕಾರ್ಖಾನೆಯ ಹಿರಿಯ ಜನರಲ್ ಮ್ಯಾನೇಜರ್ ಎನ್.ಎಸ್.ಹಿರೇಮಠ, ಉಪ ಪ್ರಾಚಾರ್ಯ ಪ್ರೊ.ಸುಧೀರ ಕೋಟಿವಾಲೆ, ಐಕ್ಯೂಎಸಿ ಸಂಯೋಜಕ ಡಾ.ವಿನಾಯಕ ಮಂಜಲಾಪುರ, ಪ್ರೊ.ಎಂ.ಆರ್.ಛಾಯಾ, ಡಾ.ಎಸ್.ಎಂ.ಪಾಟೀಲ, ಪ್ರೊ.ಎಸ್.ಎಸ್.ಪಾಟೀಲ, ಪ್ರೊ.ಶಾಂತಿನಾಥ ಲಠ್ಠೆ, ಪ್ರೊ.ರಾಜೇಶ ನಾಯ್ಕ, ಡಾ.ಸಿದ್ಧಲಿಂಗ ಮಟ್ಟೆಪ್ಪನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net