ಗೋಕಾಕ ರಾಜ್ಯ ಬಣಜಿಗ ಸಮುದಾಯದ ಕ್ಷೇಮಾಭಿವದ್ಧಿ ಸಂಘದ ತಾಲುಕು ಘಟಕದಿಂದ ತಹಸೀಲ್ದಾರಗೆ ಮನವಿ ಸಲ್ಲಿಸಲಾಯಿತು. ಸಿ.ಬಿ.ಕೌಜಲಗಿ, ಮಹಾದೇವಿ ಉಪ್ಪಿನ, ಪ್ರಶಾಂತ ಕುರಬೇಟ, ಹರ್ಷಿತಾ ಸವಣೂರ ಇತರರಿದ್ದರು.
ಬಣಜಿಗ ಸಮುದಾಯದವರು ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರಿ ನೇಮಕಾತಿಗಳಿಂದ ವಂಚಿತರಾಗುತ್ತಿದ್ದಾರೆ. ಸಮಾಜದ ಅಭಿವೃದ್ಧಿಗಾಗಿ ಬಣಜಿಗ ಸಮುದಾಯವನ್ನು ಗ್ರೂಪ್ ಡಿ ಬದಲಿಗೆ ಗ್ರೂಪ್ ಬಿ ಅಡಿಯಲ್ಲಿ ಮರುವರ್ಗೀಕರಿಸಿ ಬಣಜಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸುವಂತೆ ಮನವಿಯಲ್ಲಿ ವಿನಂತಿಸಿದ್ದಾರೆ.
ತಾಲೂಕು ಘಟಕದ ಅಧ್ಯಕ್ಷ ಸಿ.ಬಿ.ಕೌಜಲಗಿ, ಮಹಾದೇವಿ ಉಪ್ಪಿನ, ಪ್ರಶಾಂತ ಕುರಬೇಟ, ಹರ್ಷಿತಾ ಸವಣೂರ, ಸಂತೋಷ ಮಂತ್ರಣ್ಣವರ, ಮಹಾಂತೇಶ ತಾಂವಶಿ, ಬಸವರಾಜ ಕಲ್ಯಾಣಶೆಟ್ಟಿ, ಲಖಮನಗೌಡ ಪಾಟೀಲ, ಅಡಿವೇಶ ಅಂಗಡಿ ಇತರರಿದ್ದರು.