ಅಹೋರಾತ್ರಿ ಧರಣಿ ಅಂತ್ಯ

ಬೆಳಗಾವಿ ನೀರಾವರಿ ನಿಗಮದ ಎದುರಿನ ಧರಣಿಯಲ್ಲಿ ಪ್ರಮುಖ ಬೇಡಿಕೆ ಈಡೇರಿದ ಹಿನ್ನೆಲೆ ರೈತರು ಸಂಭ್ರಮಿಸಿದರು. ಬಾಳೇಶ ಮಾವನೂರೆ, ಮಲಗೌಡ ಪಾಟೀಲ, ದಯಾನಂದ ಪಾಟೀಳ, ರಾಯಗೌಡ, ಸಿದ್ಧಲಿಂಗ ಇತರರಿದ್ದರು.
ಬೆಳಗಾವಿ ನೀರಾವರಿ ನಿಗಮದ ಎದುರಿನ ಧರಣಿಯಲ್ಲಿ ಪ್ರಮುಖ ಬೇಡಿಕೆ ಈಡೇರಿದ ಹಿನ್ನೆಲೆ ರೈತರು ಸಂಭ್ರಮಿಸಿದರು. ಬಾಳೇಶ ಮಾವನೂರೆ, ಮಲಗೌಡ ಪಾಟೀಲ, ದಯಾನಂದ ಪಾಟೀಳ, ರಾಯಗೌಡ, ಸಿದ್ಧಲಿಂಗ ಇತರರಿದ್ದರು.
Published on
ಬೆಳಗಾವಿ : ಕರ್ನಾಟಕ ನೀರಾವರಿ ನಿಗಮದ ಎದುರು ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಹುಕ್ಕೇರಿ ತಾಲೂಕಿನ ಮಾಸ್ತಿಹೊಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು, ಶುಕ್ರವಾರ ನೀರಾವರಿ ಇಲಾಖೆಯ ಅಧಿಕಾರಿಗಳು ಬೇಡಿಕೆ ಈಡೇರಿಕೆ ಭರವಸೆ ನೀಡಿದ್ದರಿಂದ ಪ್ರತಿಭಟನೆ ಅಂತ್ಯಗೊಳಿಸಿದರು.
ಹಿಡಕಲ್ ಜಲಾಶಯ ಯೋಜನೆಯಿಂದ ಭೂಮಿ ಕಳೆದುಕೊಂಡ 24 ಗ್ರಾಮಗಳ ಸಂತ್ರಸ್ತ ರೈತರು, ದಾಖಲೆಗಳಲ್ಲಿನ ಲೋಪದೋಷ ಸರಿಪಡಿಸುವುದು ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜಾನುವಾರು ಸಮೇತ ನೀರಾವರಿ ನಿಗಮದ ಆವರಣದಲ್ಲೇ ಠಿಕಾಣಿ ಹೂಡಿದ್ದರು. ಶುಕ್ರವಾರ ಅಧಿಕಾರಿಗಳು ರೈತರೊಂದಿಗೆ ಸಭೆ ನಡೆಸಿ, ದಾಖಲೆಗಳಲ್ಲಿನ ಅಗತ್ಯ ತಿದ್ದುಪಡಿಗಳನ್ನು ಮಾಡಿ ಹಸ್ತಾಂತರಿಸಿದರು. ಜತೆಗೆ ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿ ಪರಿಹರಿಸುವ ಭರವಸೆ ನೀಡಿದರು.
ಹಿಡಕಲ್ ಜಲಾಶಯ ಯೋಜನೆಯಿಂದ ಸಂತ್ರಸ್ತರಾದ 24 ಗ್ರಾಮಗಳ ರೈತರ ಸುದೀರ್ಘ ಹೋರಾಟಕ್ಕೆ ಕೊನೆಗೂ ಪ್ರಾಥಮಿಕ ಯಶಸ್ಸು ಸಿಕ್ಕಿದೆ. ಆದರೆ, ಜಲಾಶಯದ ಹಿನ್ನೀರಿನಲ್ಲಿ ಸುಮಾರು 400 ಎಕರೆ ಭೂಮಿ ಮುಳುಗಡೆಯಾಗಿದೆ. ಇದರಿಂದ ರೈತರ ಜೀವನ ಅತಂತ್ರವಾಗಿತ್ತು. ಇದೀಗ ಕರ್ನಾಟಕ ನೀರಾವರಿ ನಿಗಮದ ಬೆಳಗಾವಿ ಉತ್ತರ ವಲಯದ ಅಧಿಕಾರಿಗಳು ಸಿದ್ಧಪಡಿಸಿರುವ ಅಧಿಕೃತ ವರದಿಯನ್ನೇ ಆಧಾರವಾಗಿಟ್ಟುಕೊಂಡು, ನಮಗೂ ಬಿಡದಿ ಮಾದರಿಯಲ್ಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ರೈತ ಮುಖಂಡ ಬಾಳೇಶ ಮಾವನೂರೆ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ದಯಾನಂದ ಪಾಟೀಲ, ಸಂತೋಷ ಪಾಟೀಲ, ರಾಯಗೌಡ ಪಾಟೀಲ, ಉದಯ ಹಿರೇಮಠ, ಸಿದ್ದಲಿಂಗ ಬೆನ್ನಾಡಿ, ರಾಜು ಹುದ್ದಾರ, ಭರಮಾ ಮುಂಗಾರಿ, ಪತ್ರೆಪ್ಪ ಮಾಲಾದಾನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net