ಸಾವಯವ ಕೃಷಿಗೆ ಒತ್ತು ನೀಡಿ

ನಿಡಸೋಸಿ ಪಂಚಮ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಸಗೊಬ್ಬರ ವಿತರಣಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪೃಥ್ವಿ ಕತ್ತಿ, ದುಂಡಪ್ಪ ಹೆದ್ದೂರಿ, ಸಿಕಂದರ್ ಜಮಾದಾರ್, ಬಸವರಾಜ ಮಾಳಿ ಇತರರಿದ್ದರು.
ನಿಡಸೋಸಿ ಪಂಚಮ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಸಗೊಬ್ಬರ ವಿತರಣಾ ಕೇಂದ್ರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪೃಥ್ವಿ ಕತ್ತಿ, ದುಂಡಪ್ಪ ಹೆದ್ದೂರಿ, ಸಿಕಂದರ್ ಜಮಾದಾರ್, ಬಸವರಾಜ ಮಾಳಿ ಇತರರಿದ್ದರು.
Published on
ಸಂಕೇಶ್ವರ: ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿಡಸೋಸಿ ಶ್ರೀ ಪಂಚಮ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಎಂಆರ್‌ಪಿ ದರದಲ್ಲಿ ರಸಗೊಬ್ಬರ ವಿತರಣಾ ಕೇಂದ್ರ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ಸಮೀಪದ ನಿಡಸೋಸಿ ಪಂಚಮ ಶ್ರೀ ಶಿವಲಿಂಗೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೋಮವಾರ ರಸಗೊಬ್ಬರ ವಿತರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಎಲ್ಲ ಸಹಕಾರ ಸಂಘಗಳು ಎಂಆರ್‌ಪಿ ದರದಲ್ಲಿ ಗುಣಮಟ್ಟದ ರಸಗೊಬ್ಬರ ವಿತರಿಸುವ ಮೂಲಕ ರೈತರ ಪ್ರಗತಿಗೆ ಸಹಕರಿಸಬೇಕು. ಅತಿಯಾದ ರಸಗೊಬ್ಬರ ಬಳಕೆ ತಡೆಗಟ್ಟುವ ಮೂಲಕ ರೈತರು ಸಾವಯವ ಗೊಬ್ಬರ ಬಳಸಿ, ಕೃಷಿಯನ್ನು ಲಾಭದತ್ತ ಕೊಂಡೊಯ್ಯಬೇಕು ಎಂದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ದುಂಡಪ್ಪ ಹೆದ್ದೂರಿ ಮಾತನಾಡಿ, ನಿಡಸೋಸಿ ಹಾಗೂ ಸುತ್ತಲಿನ ಗ್ರಾಮಗಳ ರೈತರ ಅನುಕೂಲಕ್ಕಾಗಿ ರಸಗೊಬ್ಬರ ಕೇಂದ್ರ ಪ್ರಾರಂಭಿಸಲಾಗಿದ್ದು, ಶೀಘ್ರದಲ್ಲಿ ಕೀಟನಾಶಕ ಕೇಂದ್ರ ಆರಂಭಿಸುವುದಾಗಿ ತಿಳಿಸಿದರು.
ಇದೇ ವೇಳೆ ರೈತರಿಗೆ ರಸಗೊಬ್ಬರ ವಿತರಣೆ ಮಾಡಲಾಯಿತು.
ಉಪಾಧ್ಯಕ್ಷ ಸಿಕಂದರ್ ಜಮಾದಾರ್, ನಿರ್ದೇಶಕರಾದ ಶಂಕರ ಮಾದನ್ನವರ, ಬಸವರಾಜ ದೊಡ್ಡಮನಿ, ದುರದುಂಡಿ ಕೆಂಗಾರ, ಸುರೇಶ ಬಿಸ್ಕೋಪ, ರವಿ ಪದ್ಮಣ್ಣವರ, ಶಿವಪ್ಪ ಯಡೂರಿ, ದುಂಡಪ್ಪ ಆಲೂರಿ, ಮಲ್ಲಪ್ಪ ಗುದಗಿ, ಕೇದಾರಿ ಮಾಳಿ, ಮಹಾದೇವ ಪರೀಟ, ಸಂತೋಷ ಸೊಲ್ಲಾಪುರಿ, ಯಶವಂತ ಮಾದಿಗರ, ಸಿಇಒ ಬಿ.ಎಸ್.ಮದಿಹಳ್ಳಿ, ಭೀಮರಾವ ಘೋರ್ಪಡೆ, ಮನೋಹರ ಘೋರ್ಪಡೆ, ಕಾಶೀಮ್ ಅತ್ತಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net