ಮುತ್ತೂಟ್ ಫೈನಾನ್ಸ್ ಸೇರಿದಂತೆ ಮೊದಲಾದ ಕಂಪನಿಗಳು ಪಾಲ್ಗೊಂಡಿದ್ದವು. ಮುಂದಿನ ದಿನಗಳಲ್ಲಿ ಚಂದ್ರಕಾಂತ ಕೋಠಿವಾಲೆ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕಂಪನಿ ಕರೆಯಿಸಲು ಪ್ರಯತ್ನ ನಡೆದಿವೆ ಎಂದರು. ಕೆಇವೈಟುಐಆರ್ ಕಂಪನಿ ಸಿಇಒ ನಾಗರಾಜ ಪರೀಟ ಆಯ್ಕೆ ಪ್ರಕ್ರಿಯೆ ಕುರಿತು ಮಾರ್ಗದರ್ಶನ ನೀಡಿದರು. ಮಂಡಳ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅಧ್ಯಕ್ಷತೆ ವಹಿಸಿದ್ದರು. ಮಂಡಳದ ಉಪಾಧ್ಯಕ್ಷ ರಜತ ಢೋಲೆ, ಕಾರ್ಯದರ್ಶಿ ಸಮೀರ್ ಬಾಗೇವಾಡಿ, ಸಂಚಾಲಕ ಹರಿಶ್ಚಂದ್ರ ಶಾಂಡಗೆ, ಸಚಿನ ಹಾಲಪ್ಪನವರ, ಪ್ರವೀಣ ಪಾಟೀಲ, ಪ್ರಾಚಾರ್ಯರಾದ ಡಾ.ಉಮೇಶ ಪಾಟೀಲ, ಚಿದಂಬರ ಜೋಶಿ, ವಿವಿಧ ಕಂಪನಿ ಅಧಿಕಾರಿಗಳಾದ ಶ್ರೀನಿವಾಸ ಕುಲಕರ್ಣಿ, ಸವಿತಾ ಪಿ., ಟ್ರೇನಿಂಗ್ ಮತ್ತು ಪ್ಲೇಸ್‌ಮೆಂಟ್ ಅಧಿಕಾರಿ ಪ್ರೊ.ಸುನೀಲ ಸಂಗೊಳ್ಳಿ ಇತರರಿದ್ದರು.