ಹನ್ನೊಂದು ಸಾವಿರ ನಕಲಿ ಮತದಾರರ ಸುಳಿವು

ಬುದಿಗೊಪ್ಪ, ಯರಝರ್ವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ವಿರೂಪಾಕ್ಷ ಮಾಮನಿ ಮಾತನಾಡಿದರು. ಮಹಾದೇವ ಮುರಗೋಡ, ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ, ಈರಣ್ಣ ಚಂದರಗಿ ಇತರರಿದ್ದರು.
ಬುದಿಗೊಪ್ಪ, ಯರಝರ್ವಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ವಿರೂಪಾಕ್ಷ ಮಾಮನಿ ಮಾತನಾಡಿದರು. ಮಹಾದೇವ ಮುರಗೋಡ, ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ, ಈರಣ್ಣ ಚಂದರಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಹೇಳಿಕೆ
  • ಎಸ್‌ಐಆರ್ ಅಭಿಯಾನ
ತಲ್ಲೂರ: ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ೧೧ ಸಾವಿರಕ್ಕೂ ಹೆಚ್ಚು ನಕಲಿ ಮತದಾರರು ಇದ್ದಾರೆ ಎನ್ನುವ ಸುಳಿವು ಸಿಕ್ಕಿದೆ ಎಂದು ಸವದತ್ತಿ ಬಿಜೆಪಿ ಮಂಡಲ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಹೇಳಿದರು.
ಬುದಿಗೊಪ್ಪ, ಯರಝರ್ವಿ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆಯ ವಿಶೇಷ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಾಗಲೇ ಪ್ರತಿ ಬೂತ್‌ಗೂ ಏಜೆಂಟರನ್ನು ನೇಮಕ ಮಾಡಿದ್ದು, ಬಿಎಲ್‌ಎ ಸರ್ಕಾರದಿಂದ ನೇಮಕವಾಗಿರುವ ಬಿಎಲ್‌ಒ ಅಧಿಕಾರಿಗಳ ಜತೆಗೂಡಿ ನಿರ್ಭಯದಿಂದ ಕೆಲಸ ಮಾಡಬೇಕು. ಬಿಎಲ್‌ಒಗಳು ಯಾವುದೇ ಒತ್ತಡಕ್ಕೂ ಮಣಿಯಬಾರದು ಎಂದರು.
ಸವದತ್ತಿ ತಾಲೂಕು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಹಾದೇವ ಮುರಗೋಡ ಮಾತನಾಡಿ, ಪ್ರಜಾಪ್ರಭುತ್ವದ ಬಲ ವರ್ಧನೆಗೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮನೆಮನೆಗೆ ತೆರಳಿ ಎಸ್‌ಐಆರ್ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.
ತಾಲೂಕು ಬಿಜೆಪಿ ಮುಖಂಡ ಬಸಯ್ಯ ಹಿರೇಮಠ, ಜಗದೀಶ ಕೌಜಗೇರಿ, ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಈರಣ್ಣ ಚಂದರಗಿ, ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಆನಂದ ಬಾಗೋಡಿ, ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕೃಷ್ಣ ತೋರಗಲ್ಲ, ಯರಗಟ್ಟಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಚೇತನ ಜಕಾತಿ, ಮಾಧ್ಯಮ ಪ್ರಮುಖ ವೀರಣ್ಣ ವೀರಶೆಟ್ಟಿ, ಮಲ್ಲೇಶ ಕಲಕುಟ್ರಿ, ಬಸರತ ಬಮನ್ನವರ, ಕಲ್ಮೇಶ ಸೊಪ್ಪಡ್ಲ, ಬಸವರಾಜ ಇಂಚಲ, ಪಿಕೆಪಿಎಸ್ ಮಾಜಿ ಅಧ್ಯಕ್ಷ ನೀಲಕಂಠ ಕಾನೋಜಿ, ಚಾಯಪ್ಪ ಸಿಂಗನವರ, ಮಲ್ಲಿಕಾರ್ಜುನ ರುದ್ರಪ್ಪನವರ, ಫಕೀರಪ್ಪ ದಾಸಪ್ಪನವರ, ಗೀತಾ ಕಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net