ಮೂಲಸೌಕರ್ಯ ಒದಗಿಸಲು ಪ್ರಯತ್ನ

ಬೋರಗಾಂವ ಪಪಂ ವತಿಯಿಂದ ಫಲಾನುಭವಿಗಳಿಗೆ ಯುವ ಮುಖಂಡ ಉತ್ತಮ ಪಾಟೀಲ ಹೊಲಿಗೆ ಯಂತ್ರ ವಿತರಿಸಿದರು. ಪಿಂಟು ಕಾಂಬಳೆ, ಭಾರತಿ ವಸವಾಡೆ, ಪ್ರದೀಪ ಮಾಳಿ, ಅಭಯಕುಮಾರ ಮಗದುಮ್ ಇತರರಿದ್ದರು.
ಬೋರಗಾಂವ ಪಪಂ ವತಿಯಿಂದ ಫಲಾನುಭವಿಗಳಿಗೆ ಯುವ ಮುಖಂಡ ಉತ್ತಮ ಪಾಟೀಲ ಹೊಲಿಗೆ ಯಂತ್ರ ವಿತರಿಸಿದರು. ಪಿಂಟು ಕಾಂಬಳೆ, ಭಾರತಿ ವಸವಾಡೆ, ಪ್ರದೀಪ ಮಾಳಿ, ಅಭಯಕುಮಾರ ಮಗದುಮ್ ಇತರರಿದ್ದರು.
Published on
ಬೋರಗಾಂವ: ಜನಸಾಮಾನ್ಯರಿಗೆ ಸರ್ಕಾರದ ವಿವಿಧ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರ ಜತೆಗೂಡಿ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದೇವೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಗುರುವಾರ ಫಲಾನುಭವಿಗೆ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ, ಪಟ್ಟಣದ ನಾಗರಿಕರಿಗೆ ಉಚಿತ ಗ್ಯಾಸ್, ಹೊಲಿಗೆ ಯಂತ್ರ, ಅಂಗವಿಕಲರಿಗೆ ತ್ರಿಚಕ್ರ ವಾಹನ ಸೇರಿ ಮೂಲಸೌಕರ್ಯ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು.
ಪಪಂ ಸದಸ್ಯ ಅಭಯಕುಮಾರ ಮಗದುಮ್ ಮಾತನಾಡಿ, ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಭಾರತಿ ವಸವಾಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಸದಸ್ಯರಾದ ಶೋಭಾ ಹವಲೆ, ಮಾಣಿಕ ಕುಂಬಾರ, ತುಳಸಿದಾಸ ವಾಸವಾಡೆ, ದಿಗಂಬರ ಕಾಂಬ್ಳೆ, ಅಶ್ವಿನಿ ಪವಾರ, ವರ್ಷಾ ಮಂಗುಟೆ, ಗಿರಿಜಾ ವಠಾರೆ, ಸುವರ್ಣಾ ಸೋಬಾನೆ, ಸಂಗೀತಾ ಶಿಂಗೆ, ಜಾವೇದ ಮಕಾಂದರ, ರುಕ್ಸಾನಾ ಆಫ್ರಾಜ್, ಅಮರ ಶಿಂಗೆ ಇತರರಿದ್ದರು.
ಸಂಘದ ಲಾಭ ಪಡೆದುಕೊಳ್ಳಲಿ
ಬೋರಗಾಂವ: ಗಡಿಭಾಗದ ರೈತರು, ಕಬ್ಬು ಉತ್ಪಾದಕರು ಮತ್ತು ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಬೋರಗಾಂವ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ ವತಿಯಿಂದ ವಿವಿಧ ಯೋಜನೆ ಜಾರಿಗೆ ತರಲಾಗಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಪಟ್ಟಣದ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘದ ಸಾಲಗಾರ ಸದಸ್ಯರಾದ ಪ್ರವೀಣ ನರವಾಡೆ, ಗುಣಪಾಲ ನರವಾಡೆ, ಪೋಪಟ ಘುಬಡೆ ಈಚೆಗೆ ನಿಧನರಾದ ಹಿನ್ನೆಲೆಯಲ್ಲಿ ಆರೋಗ್ಯ ವಿಮಾ ಯೋಜನೆಯಿಂದ ಮೃತರ ವಾರಸುದಾರರಿಗೆ ಗುರುವಾರ ತಲಾ ೧ ಲಕ್ಷ ರೂ. ಚೆಕ್ ವಿತರಿಸಿ ಮಾತನಾಡಿದರು.
ಸಂಘದಲ್ಲಿ ಆರೋಗ್ಯ ವಿಮೆ, ಅಪಘಾತ ವಿಮೆ, ಶೂನ್ಯ ಬಡ್ಡಿದರದಲ್ಲಿ ಸಾಲ, ಟ್ರ‍್ಯಾಕ್ಟರ್ ಸೇರಿ ಹಲವಾರು ಯೋಜನೆಗಳಿದ್ದು, ಅವುಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಚೇತನ ಸ್ವಾಮಿ, ಉಪಾಧ್ಯಕ್ಷ ಸುಮಿತ ರೊಡ್ಡ, ನಿರ್ದೇಶಕ ಪ್ರದೀಪ ಮಾಳಿ, ರಾಜು ಐದಮಾಳೆ, ರಾಜೇಂದ್ರ ಪಾಟೀಲ, ದರ್ಶನ ಪಾಟೀಲ, ಸುರೇಶ ಬಂಕಾಪುರೆ, ರಾಜು ಗಜರೆ, ಅಶೋಕ ಮಾಳಿ, ವಿವೇಕಾನಂದ ಸೋಲಂಕುರೆ, ಸಿಇಒ ರಾವಸಾಹೇಬ ಚೌಗುಲೆ, ಬಾಬಾಸಾಹೇಬ ಅಸ್ವಾಲೆ, ರಾಕೇಶ ಫಿರಗನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net