ಶಿಕ್ಷಣದಿಂದ ವಿದ್ಯಾರ್ಥಿಗಳ ಉನ್ನತಿ ಸಾಧ್ಯ

ಯಮಕನಮರಡಿಯಲ್ಲಿ ಹಮ್ಮಿಕೊಂಡಿದ್ದ ಸತೀಶ ಪ್ರತಿಭಾ ಪುರಸ್ಕಾರ-೨೫ರ ಸಮಾರೋಪ ಸಮಾರಂಭದಲ್ಲಿ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಶ್ರೀ ಮಾತನಾಡಿದರು. ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಭಿನವ ಮಂಜುನಾಥ ಶ್ರೀ, ಅಪ್ಪಾಸಾಹೇಬ ಶಿರಕೊಳಿ, ಮೋಘವರ್ಷ ದೇಶಪಾಂಡೆ ಇತರರಿದ್ದರು.
ಯಮಕನಮರಡಿಯಲ್ಲಿ ಹಮ್ಮಿಕೊಂಡಿದ್ದ ಸತೀಶ ಪ್ರತಿಭಾ ಪುರಸ್ಕಾರ-೨೫ರ ಸಮಾರೋಪ ಸಮಾರಂಭದಲ್ಲಿ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಶ್ರೀ ಮಾತನಾಡಿದರು. ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಅಭಿನವ ಮಂಜುನಾಥ ಶ್ರೀ, ಅಪ್ಪಾಸಾಹೇಬ ಶಿರಕೊಳಿ, ಮೋಘವರ್ಷ ದೇಶಪಾಂಡೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಂಚಮ ಶಿವಲಿಂಗೇಶ್ವರ ಶ್ರೀ ಅಭಿಮತ
  • ೧೨ನೇ ಸತೀಶ ಪ್ರತಿಭಾ ಪುರಸ್ಕಾರ
ಉಳ್ಳಾಗಡ್ಡಿ-ಖಾನಾಪುರ: ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕೃತಿ ನೀಡಿದರೆ ಮಕ್ಕಳು ಬೆಳೆಯುತ್ತಾರೆಂಬ ಉದ್ದೇಶದಿಂದ ಸತೀಶ ಜಾರಕಿಹೊಳಿ ಅವರು ಇಂಥ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕಾರ್ಯಕ್ರಮ ನಡೆಸುತ್ತಿರುವುದು ಸ್ವಾಗತಾರ್ಹ ಎಂದು ನಿಡಸೋಸಿಯ ಸಿದ್ದ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಯಮಕನಮರಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸತೀಶ ಪ್ರತಿಭಾ ಪುರಸ್ಕಾರ-೨೫ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಅಗತ್ಯವಿರುವ ಶಿಕ್ಷಣ ಹಾಗೂ ಸಂಸ್ಕೃತಿಯನ್ನು ಬದುಕಿಗೆ ನೀಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆಂಬ ದೂರದೃಷ್ಟಿಯಿಂದ ಸಚಿವ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ ಎಂದರು.
ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಬಿಡಿಸಿಸಿ ನಿರ್ದೇಶಕ ರಾಹುಲ ಜಾರಕಿಹೊಳಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅಪ್ಪಾಸಾಹೇಬ ಶಿರಕೊಳಿ, ಮೋಘವರ್ಷ ದೇಶಪಾಂಡೆ, ಡಾ.ಈರಪ್ಪ ಘಸ್ತಿ, ಸಿದ್ದಪ್ಪ ಕುಡಚಿ, ಡಾ.ಅಶೋಕ ಬೊರಗಲ್ಲಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅಪ್ಪಾಸಾಹೇಬ ಶಿರಕೊಳಿ, ಕಾರ್ಯದರ್ಶಿ ರಿಯಾಜ್ ಚೌಗಲಾ, ಕಿರಣ ರಜಪೂತ, ರವಿಂದ್ರ ಜಿಂಡ್ರಾಳಿ, ಶಶಿಕಾಂತ ಹಟ್ಟಿ ಇತರರಿದ್ದರು.

ಸತೀಶ ಪ್ರತಿಭಾ ಪುರಸ್ಕಾರ ಪ್ರತಿಭೆಯೆಂಬ ಕಣ್ಣು ಕೊಟ್ಟು ನಾಡು-ರಾಷ್ಟ್ರಕ್ಕೆ ಗುರುತಿಸುವಂತೆ ಮಾಡಿದೆ. ಬುದ್ಧ್ದನ ಧ್ಯಾನ, ಬಸವಣ್ಣನ ಕಾಯಕ, ಅಂಬೇಡ್ಕರರ ಸಂವಿಧಾನದ ನಡೆಯಲ್ಲಿ ಹೆಜ್ಜೆ ಇಟ್ಟಾಗ ಬದುಕು ಸರಳತೆ ಕಾಣುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net