ಸಹಕಾರ ಸಂಘಗಳಿಂದ ಆರ್ಥಿಕ ಅಭಿವೃದ್ಧಿ

ಬೋರಗಾಂವ ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಶಿವಾನಂದ ಮಾಳಿ ಇತ್ತೀಚೆಗೆ ನಿಧನರಾದ ಹಿನ್ನೆಲೆ ವಾರಸುದಾರ ಅಕ್ಕಾತಾಯಿ ಮಾಳಿ ಅವರಿಗೆ ಉತ್ತಮ ಪಾಟೀಲ 1 ಲಕ್ಷ ರೂ. ಚೆಕ್ ವಿತರಿಸಿದರು. ಸುಮಿತ ರೊಡ್ಡ, ರಾವಸಾಹೇಬ ಚೌಗುಲೆ, ಪ್ರದೀಪ ಮಾಳಿ ಇತರರಿದ್ದರು.

Published on
ಬೋರಗಾಂವ: ಸಹಕಾರ ಸಂಘಗಳಿಂದ ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ಧಿ ಸಾಧ್ಯ ಎಂದು ಕೃಷಿ ಪತ್ತಿನ ಸಂಘದ ಅಧ್ಯಕ್ಷ ಉತ್ತಮ ಪಾಟೀಲ ಹೇಳಿದರು.
ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ಸಂಘದ ಸಾಲಗಾರ ಸದಸ್ಯ ಶಿವಾನಂದ ಮಾಳಿ ಇತ್ತೀಚೆಗೆ ನಿಧನರಾದ ಹಿನ್ನೆಲೆ ಆರೋಗ್ಯ ವಿಮೆ ಯೋಜನೆಯಡಿ ಅವರ ವಾರಸುದಾರ ಅಕ್ಕಾತಾಯಿ ಮಾಳಿ ಅವರಿಗೆ 1 ಲಕ್ಷ ರೂ. ಚೆಕ್ ವಿತರಿಸಿ ಮಾತನಾಡಿ, ರೈತರು, ಕಬ್ಬು ಉತ್ಪಾದಕರು ಮತ್ತು ಗ್ರಾಮೀಣ ಪ್ರದೇಶದ ಸದಸ್ಯರ ಕಲ್ಯಾಣಕ್ಕಾಗಿ, ಬೋರಗಾಂವ ಪ್ರಾಥಮಿಕ ಗ್ರಾಮೀಣ ಕೃಷಿ ಸಂಘ ವತಿಯಿಂದ ವಿವಿಧ ಯೋಜನೆ ಕೈಗೊಂಡಿದ್ದೇವೆ. ಆರೋಗ್ಯ ವಿಮೆ, ಅಪಘಾತ ವಿಮೆ, ಶೂನ್ಯ ಬಡ್ಡಿದರ ಸಾಲ, ನೀರಿನ ಯೋಜನೆ, ಟ್ರ್ಯಾಕ್ಟರ್ ಸಾಲ ಯೋಜನೆ ಇವೆ. ಎಲ್ಲ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದರು.
ಉಪಾಧ್ಯಕ್ಷ ಸುಮಿತ ರೊಡ್ಡ, ನಿರ್ದೇಶಕ ಪ್ರದೀಪ ಮಾಳಿ, ರಾಜು ಐದಮಾಳೆ, ರಾಜೇಂದ್ರ ಪಾಟೀಲ, ಪ್ರವೀಣ ಪಾಟೀಲ, ಶಿವಾನಂದ ಇಂಗಳೆ, ದರ್ಶನ ಪಾಟೀಲ, ಸುರೇಶ ಬಂಕಾಪುರೆ, ರಾಜು ಗಜರೆ, ಅಶೋಕ ಮಾಳಿ, ಸಿಇಒ ರಾವಸಾಹೇಬ ಚೌಗುಲೆ, ರಾಕೇಶ್ ಫಿರಗನ್ನವರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net