ಮಾದಕ ವಸ್ತು ಹಾಗೂ ನಿದ್ರಾಜನಕ ವಸ್ತುಗಳನ್ನು ಡ್ರಗ್ಸ್ ಡಿಸ್ಪೋಸಲ್ ಕಮಿಟಿ, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ, ಅಪರಾಧ ವಿಭಾಗದ ಎಸಿಪಿ, ಸಿಸಿಆರ್‌ಬಿ ವಿಭಾಗದ ಪಿಐ ಮತ್ತು ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡವು, ಪರಿಸರ ಅಧಿಕಾರಿ, ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಇಲಾಖೆ, ಉಪ ಔಷಧಿ ನಿಯಂತ್ರಕ, ಕಾರ್ಖಾನೆಗಳ ವಿಭಾಗದ ಪ್ರಾದೇಶಿಕ ಕಚೇರಿ ಉಪನಿರ್ದೇಶಕರ ಸಮ್ಮುಖದಲ್ಲಿ ಸವದತ್ತಿ ತಾಲೂಕಿನ ಹಾರೂಗೊಪ್ಪದ ಬೆಳಗಾಂ ಗ್ರೀನ್ ಎನ್ವಿರಾನ್‌ಮೆಂಟ್ ಮ್ಯಾನೇಜ್ ಮೆಂಟ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯಲ್ಲಿ ವಿಲೇವಾರಿಗೊಳಿಸಿದೆ.