ರೈತರಿಗೆ ಡ್ರೋನ್​ ಸಹಕಾರಿ

ಮತ್ತಿಕೊಪ್ಪದ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದಿಂದ ರೈತ ನಾಗರಾಜ ತಲ್ಲೂರ ಹಾಗೂ ಸಹೋದರರಿಗೆ ನೀಡಲಾದ ಡ್ರೋನ್​ ಹಸ್ತಾಂತರ ಸಂದರ್ಭದಲ್ಲಿ ಡಾ. ಮಂಜುನಾಥ ಚೌರಡ್ಡಿ, ಡಾ.ಪಿ.ಎಸ್​.ಹೂಗಾರ, ಪ್ರವಿಣ ಯಡಹಳ್ಳಿ, ಎಸ್​.ಎಂ.ವಾರದ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ಮಂಜುನಾಥ ಪಿ.ಐ., ಬಸವರಾಜ ಅಮ್ಮಿನಬಾವಿ, ವೀಣಾ ಬನ್ನೂರ ಇತರರಿದ್ದರು.
ಮತ್ತಿಕೊಪ್ಪದ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದಿಂದ ರೈತ ನಾಗರಾಜ ತಲ್ಲೂರ ಹಾಗೂ ಸಹೋದರರಿಗೆ ನೀಡಲಾದ ಡ್ರೋನ್​ ಹಸ್ತಾಂತರ ಸಂದರ್ಭದಲ್ಲಿ ಡಾ. ಮಂಜುನಾಥ ಚೌರಡ್ಡಿ, ಡಾ.ಪಿ.ಎಸ್​.ಹೂಗಾರ, ಪ್ರವಿಣ ಯಡಹಳ್ಳಿ, ಎಸ್​.ಎಂ.ವಾರದ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ಮಂಜುನಾಥ ಪಿ.ಐ., ಬಸವರಾಜ ಅಮ್ಮಿನಬಾವಿ, ವೀಣಾ ಬನ್ನೂರ ಇತರರಿದ್ದರು.
Published on
ಬೆಳಗಾವಿ: ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದಿಂದ ಉದ್ಯಮಶೀಲತಾ ಅಭಿವೃದ್ಧಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ರೈತರಿಗೆ ಡ್ರೋನ್​ ಮೂಲಕ ಕೃಷಿ ರಾಸಾಯನಿಕಗಳು ಹಾಗೂ ಕೀಟನಾಶಕಗಳನ್ನು ಸಿಂಪಡಣೆ ಮಾಡಲು ಅನುಕೂಲವಾಗುವಂತೆ ಯುವಕರನ್ನು ಪ್ರೋತ್ಸಾಹಿಸುತ್ತಿದ್ದು, ಈ ನಿಟ್ಟಿನಲ್ಲಿ ಮತ್ತಿಕೊಪ್ಪದಲ್ಲಿನ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರ(ಕೆವಿಕೆ)ದ ವಿಜ್ಞಾನಿಗಳು ಮಲ್ಲಾಪುರ ಗ್ರಾಮದ ನಾಗರಾಜ ತಲ್ಲೂರ ಹಾಗೂ ಸಹೋದರರಿಗೆ ಸೆಲ್ಕೋ ಕಂಪನಿಯ ಸಹಯೋಗದೊಂದಿಗೆ ಡ್ರೋನ್​ ಮಷಿನ್​ ಒದಗಿಸಿದ್ದಾರೆ.
ಈಗಾಗಲೇ ರೈತ ನಾಗರಾಜ ಕೆವಿಕೆಯಿಂದ ಡ್ರೋನ್​ ಪೈಲೆಟ್​ ತರಬೇತಿ ಪೂರ್ಣಗೊಳಿಸಿದ್ದಾರೆ. ಇಂತಹ ರೈತರ ಸೇವೆಯಲ್ಲಿ ಕೆವಿಕೆ ಮೂಲಕ ನೀಡಲಾದ ಮೂರನೆಯ ಡ್ರೋನ್​ ಇದಾಗಿದೆ.
ಡ್ರೋನ್​ ಹಸ್ತಾಂತರ ವೇಳೆ ಸಂಸ್ಥೆ ಮುಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ಮಾತನಾಡಿ, ಸಂದಿಗ್ಧ ಕೃಷಿ ಪರಿಸ್ಥಿತಿಗಳಲ್ಲಿ ಕೃಷಿ ಪರಿಕರಗಳನ್ನು ಸಿಂಪಡಣೆ ಮಾಡಲು ಡ್ರೋನ್​ ಸಹಕಾರಿಯಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ಕೃಷಿ ವ್ಯವಸ್ಥೆಯಲ್ಲಿ ಡ್ರೋನ್​ ಸದ್ಬಳಕೆ ಕುರಿತು ರೈತರಲ್ಲಿ ಅರಿವು ಮೂಡಿಸುವ ಹಾಗೂ ಯುವಕರಲ್ಲಿ ಉದ್ಯಮಶೀಲತಾ ಮನೋಭಾವ ತುಂಬಲು ಇನ್ನಷ್ಟು ಕಾರ್ಯಕ್ರಮಗಳನ್ನು ಕೇಂದ್ರದಿಂದ ಹಮ್ಮಿಕೊಳ್ಳಲಾಗುವುದು ಎಂದರು.
ಹೊಸದಾಗಿ ಸ್ವೀಕರಿಸಲಾದ ಡ್ರೋನ್​ ಮಷಿನ್​ ಕುರಿತು ನಾಗರಾಜ ತಲ್ಲೂರ ಹಾಗೂ ಕೇಂದ್ರದ ಡ್ರೋನ್​ ವಿಜ್ಞಾನಿ ಪ್ರವಿಣ ಯಡಹಳ್ಳಿ ವಿವರಿಸಿದರು.
ಕೆಎಲ್​ಇ ಕೃಷಿ ಮಹಾವಿದ್ಯಾಲಯದ ಡೀನ್​ ಡಾ.ಪಿ.ಎಸ್​.ಹೂಗಾರ, ಕೇಂದ್ರದ ವಿಜ್ಞಾನಿಗಳಾದ ಎಸ್​.ಎಂ.ವಾರದ, ಡಾ.ಗುರುರಾಜ ಕೌಜಲಗಿ, ಶಂಕರಗೌಡ ಪಾಟೀಲ, ಮಂಜುನಾಥ ಪಿ.ಐ., ಬಸವರಾಜ ಅಮ್ಮಿನಬಾವಿ, ವೀಣಾ ಬನ್ನೂರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net