ಪ್ರತಿ ಮನೆಗೂ ಕುಡಿಯುವ ನೀರು

ಸತ್ತಿಗೇರಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಪ್ರಕಾಶ ವಾಲಿ, ನೀಲಕಂಠ ಸಿದ್ದಬಸನ್ನವರ ಇತರರಿದ್ದರು.
ಸತ್ತಿಗೇರಿ ಗ್ರಾಮದಲ್ಲಿ 30 ಲಕ್ಷ ರೂ. ವೆಚ್ಚದ ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಪ್ರಕಾಶ ವಾಲಿ, ನೀಲಕಂಠ ಸಿದ್ದಬಸನ್ನವರ ಇತರರಿದ್ದರು.
Published on
ಸತ್ತಿಗೇರಿ: ಗ್ರಾಮೀಣ ಭಾಗದ ಪ್ರತಿ ಮನೆ ಮನೆಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಒದಗಿಸುವುದು ಮುಖ್ಯ ಧ್ಯೇಯವಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 2025-26ನೇ ಸಾಲಿನ ಯೋಜನೆಯಡಿ 30 ಲಕ್ಷ ರೂ. ವೆಚ್ಚದಲ್ಲಿ ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಮೇಲ್ಮಟ್ಟದ ಜಲ ಸಂಗ್ರಹಾಲಯ ನಿರ್ಮಾಣದಿಂದ ಸತ್ತಿಗೇರಿ ಗ್ರಾಮದ ಸಾರ್ವಜನಿಕರ ಕುಡಿಯುವ ನೀರಿನ ಅಗತ್ಯತೆ ಸಂಪೂರ್ಣ ಈಡೇರಲಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಪ್ರಕಾಶ ವಾಲಿ, ಮಲಿಕಸಾಬ್ ಬಾಗವಾನ, ಬಂಗಾರೆಪ್ಪ ಹುರಳಿ, ಸುರೇಶ ಭಜಂತ್ರಿ, ಬಸವರಾಜ ಸತ್ತೂರಿ, ಯಂಕಣ್ಣ ಕಳ್ಳಿಗುದ್ದಿ, ಪಿಡಿಒ ಎ.ಬಿ.ಬಂಗಾರಿ, ಗೋಪಾಲ ದಳವಾಯಿ, ಉಮೇಶ ಮಾಗುಂಡನ್ನವರ, ಸಿದ್ದಪ್ಪ ರಂಗರಣ್ಣವರ, ಬನಪ್ಪಗೌಡ ಪಾಟೀಲ, ಮುಗಬಸೀರ್ ಬಾಗವಾನ, ಜಯವಂತ ಹಾದಿಮನಿ, ರುದ್ರಪ್ಪ ತುಮಂದಿ, ನಾಗಪ್ಪ ತುರಮಂದಿ, ಶಿವಪ್ಪ ದೇಸಾಯಿ, ಬಸವರಾಜ ಅಯ್ಯನಗೌಡ್ರ, ಪ್ರೇಮ ರಾಠೋಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net