ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಡಾ.ಸಂತೋಷ ಕುರಬೇಟ, ಡಾ.ಸ್ವಪ್ನಿಲ ಪಟ್ಟಣಶೆಟ್ಟಿ, ಡಾ.ಅಚ್ಯುತ್ ಶಿವಾಪೂರೆ, ಡಾ.ಬೃಂದಾ ಕೆ. ಇತರರಿದ್ದರು.
Published on:
Copied
Follow Us
ಬೆಳಗಾವಿ: ಮುಂದಿನ ತಲೆಮಾರಿನ ವೈದ್ಯರನ್ನು ಗಮನದಲ್ಲಿಟ್ಟುಕೊಂಡು ಆಧುನಿಕ ಶಸ್ತ್ರಚಿಕಿತ್ಸೆಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಬಾಲ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಸಂತೋಷ ಕುರಬೇಟ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಡೆಕ್ಕನ್ ಅಸೋಸಿಯೇಶನ್ ಆಫ್ ಪಿಡಿಯಾಟ್ರಿಕ್ ಸರ್ಜನ್ಸ್ ಸಂಸ್ಥೆಯ ಪ್ರಥಮ ಸಮ್ಮೇಳನ ಹಾಗೂ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನವಜಾತ ಹಾಗೂ ಮಕ್ಕಳ ಶಸ್ತ್ರಚಿಕಿತ್ಸೆ ಸೂಕ್ಷ್ಮ ಕ್ಷೇತ್ರದಲ್ಲಿ ಇತ್ತೀಚಿನ ವೈದ್ಯಕೀಯ ಸಾಧನೆಗಳು, ಸಂಕೀರ್ಣ ಪ್ರಕರಣಗಳ ಪ್ರಸ್ತುತೀಕರಣ ಹಾಗೂ ಆಪರೇಷನ್ ಥಿಯೇಟರ್‌ನಲ್ಲಿ ತಂತ್ರಜ್ಞಾನದ ಪಾತ್ರ ಹೆಚ್ಚುತ್ತಿದೆ. ಅತ್ಯಂತ ಸಂಕೀರ್ಣ ಪ್ರಕರಣ ನಿರ್ವಹಿಸುವಾಗ ವೈದ್ಯರು ಅನುಭವ ಹಂಚಿಕೊಳ್ಳುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದರು.
ಶಸ್ತ್ರಚಿಕಿತ್ಸಕರಾದ ಡಾ.ಕಾಂತ್ ಶಾ, ಡಾ.ವಿಜಯ ಪಾಟೀಲ ಮತ್ತು ಡಾ.ದಿನೇಶ ಕಿಟ್ಟೂರು ಮಾತನಾಡಿದರು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ರೋಬಾಟಿಕ್ ಮತ್ತು ಲ್ಯಾಪರೋಸ್ಕೋಪಿಕ್ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ತಜ್ಞವೈದ್ಯ ಡಾ.ಸ್ವಪ್ನಿಲ ಪಟ್ಟಣಶೆಟ್ಟಿ, ಡಾ.ಅಚ್ಯುತ್ ಶಿವಾಪೂರೆ, ಡಾ.ಬೃಂದಾ ಕೆ. ಇತರರಿದ್ದರು.