ಡಾ.ಸಂಪತ್‌ಕುಮಾರ ಸೇವೆ ಸ್ಮರಣೀಯ

ಅಥಣಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಡಾ.ಸಂಪತ್‌ಕುಮಾರ ಶಿವಣಗಿ ನುಡಿನಮನ ಕಾರ್ಯಕ್ರಮದಲ್ಲಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಶಾಸಕ ಲಕ್ಷ್ಮಣ ಸವದಿ, ಡಾ.ಉದಯಾ ಶಿವಣಗಿ, ಡಾ.ಮಲ್ಲಿಕಾರ್ಜುನ ಹಂಜಿ, ಶಿವಶಂಕರ ಹಂಜಿ, ಸುನೀಲ ಶಿವಣಗಿ, ಡಾ.ಸ್ಮಿತಾ ಚೌಗಲಾ, ಸಂತೋಷ ಶಿವಣಗಿ ಇತರರಿದ್ದರು.
ಅಥಣಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಡಾ.ಸಂಪತ್‌ಕುಮಾರ ಶಿವಣಗಿ ನುಡಿನಮನ ಕಾರ್ಯಕ್ರಮದಲ್ಲಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ, ಶಾಸಕ ಲಕ್ಷ್ಮಣ ಸವದಿ, ಡಾ.ಉದಯಾ ಶಿವಣಗಿ, ಡಾ.ಮಲ್ಲಿಕಾರ್ಜುನ ಹಂಜಿ, ಶಿವಶಂಕರ ಹಂಜಿ, ಸುನೀಲ ಶಿವಣಗಿ, ಡಾ.ಸ್ಮಿತಾ ಚೌಗಲಾ, ಸಂತೋಷ ಶಿವಣಗಿ ಇತರರಿದ್ದರು.
Published on
ಅಥಣಿ: ಕಾಯಕದ ಹಣ ಸಮಾಜಕ್ಕೆ ವಿನಿಯೋಗಿಸುವ ಮೂಲಕ ಡಾ.ಸಂಪತ್‌ಕುಮಾರ ಶಿವಣಗಿ ಅಜರಾಮರವಾಗಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಹಮ್ಮಿಕೊಂಡ ಡಾ.ಸಂಪತ್‌ಕುಮಾರ ಶಿವಣಗಿ ಪ್ರಥಮ ಪುಣ್ಯಸ್ಮರಣೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜಮುಖಿ ಸೇವಾಕಾರ್ಯಗಳಿಂದ ಮಾತ್ರ ಹೆಜ್ಜೆ ಗುರುತು ಉಳಿಯಲು ಸಾಧ್ಯ. ಒಳ್ಳೆಯ ಕಾರ್ಯ ಮಾಡುವವರು ಚಿರಸ್ಮರಣೀಯರಾಗಿರುತ್ತಾರೆ. ಹೃದಯ ಶ್ರೀಮಂತರಾಗಿರುವ ಸಂಪತ್‌ಕುಮಾರರ ತಾಯ್ನಡಿನ ಪ್ರೀತಿ, ಅಭಿಮಾನ, ಸೇವೆ ಎಲ್ಲರಿಗೂ ಮಾದರಿ ಎಂದರು.
ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನ ಹಂಜಿ ಮಾತನಾಡಿ, ಡಾ.ಸಂಪತ್‌ಕುಮಾರ ಶಿವಣಗಿ ಹಲವಾರು ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. 2001ರಲ್ಲಿ ಗುಜರಾತನಲ್ಲಿ ಭೂಕಂಪ ಸಂಭವಿಸಿದಾಗ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಜಾರ್ಜ್ ಬುಷ್ 1 ಸಾವಿರ ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ನೆರವು ನೀಡಿ, ಅದರ ಜವಾಬ್ದಾರಿಯನ್ನು ಡಾ.ಸಂಪತ್‌ಕುಮಾರಗೆ ವಹಿಸಿದ್ದರು. ಅಮೆರಿಕದ ಆರೋಗ್ಯ ಸಂಸ್ಥೆ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಹಾದಿಯಲ್ಲಿ ಪತ್ನಿ ಡಾ.ಉದಯಾ ಶಿವಣಗಿ ಮುನ್ನಡೆದಿರುವುದು ಹೆಮ್ಮೆಯ ಸಂಗತಿ ಎಂದರು.
ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಹೊರದೇಶದಲ್ಲಿದ್ದರು ನಮ್ಮ ದೇಶದ ಘನತೆ, ಗೌರವ ಹೆಚ್ಚಿಸಿ ಇಲ್ಲಿಯ ಜನರಿಗೆ ಅನುಕೂಲ ಒದಗಿಸಿದ ಡಾ.ಶಿವಣಗಿ ಸೇವಾಕಾರ್ಯ ಚಿರಸ್ಥಾಯಿ ಎಂದರು.
ಡಾ.ಉದಯಾ ಶಿವಣಗಿ ಮಾತನಾಡಿ, ಡಾ.ಸಂಪತ್‌ಕುಮಾರ ಆತ್ಮ ಅಥಣಿಯಲ್ಲಿದೆ. ಅವರ ದಾರಿಯಲ್ಲಿ ನಾವು ಮುನ್ನಡೆಯುತ್ತೇವೆ. ಡಾ.ಸಂಪತ್‌ಕುಮಾರ ಮೌಲ್ಯ, ಸೇವೆ ಮಾಡುವ ಗುಣ ನಮಗೆಲ್ಲ ಪ್ರೇರಕಶಕ್ತಿ. ಶಿವಣಗಿ ಕುಟುಂಬ ನಿರಂತರವಾಗಿ ಸಮಾಜಸೇವೆಯಲ್ಲಿ ಇರಲಿದೆ ಎಂದರು.
ಉದ್ಯಮಿ ಶಿವಶಂಕರ ಹಂಜಿ ಮಾತನಾಡಿ, ಸರಳ, ಸಜ್ಜನಿಕೆಯ ಉನ್ನತ ವಿಚಾರಧಾರೆ ವ್ಯಕ್ತಿಯಾಗಿದ್ದ ಡಾ.ಸಂಪತ್‌ಕುಮಾರ ಬಡವರಿಗೆ, ರೋಗಿಗಳಿಗೆ ಸಹಾಯ ಮಾಡುವ ಸೇವಾಮನೋಭಾವ ಹೊಂದಿದ್ದರು ಎಂದರು. ಸಮಾಜ ಸೇವಕ ಶಂಭುಲಿಂಗ ಮಮದಾಪುರ ಮಾತನಾಡಿದರು. ಡಾ.ಸಂಪತ್‌ಕುಮಾರ ಶಿವಣಗಿ ಭಾವಚಿತ್ರಕ್ಕೆ ನುಡಿನಮನ ಸಲ್ಲಿಸಲಾಯಿತು. ಡಾ.ಸ್ಮಿತಾ ಚೌಗಲಾ, ಸುನೀಲ ಶಿವಣಗಿ, ಸಂತೋಷ ಶಿವಣಗಿ, ಕೈಲಾಸ ಶಿವಣಗಿ, ಪ್ರಸಾದ ಶಿವಣಗಿ, ಹಿರಿಯರಾದ ಶ್ರೀಶೈಲ ಸಂಕ, ಎಂ.ಡಿ.ತೊದಲಬಾಗಿ, ಮನೋಹರ ಹಂಜಿ, ವಿಜಯಕುಮಾರ ಬುರ್ಲಿ, ಅಶೋಕ ಬುರ್ಲಿ, ರಮೇಶ ಸಿಂದಗಿ, ಚಂದ್ರಶೇಖರ ಯಲ್ಲಟ್ಟಿ, ಸಂಗಪ್ಪ ಉಣಿ, ಶಿವಕುಮಾರ ಮೆನಸಿ, ಪ್ರಕಾಶ ಪಾಟೀಲ, ಪ್ರಶಾಂತ ಮಗದುಮ್ಮ ಇತರರಿದ್ದರು.
21-1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net