ಡಾ.ಕೋರೆಗೆ ವಿದ್ಯಾವಾರೇಣ್ಯ ಪ್ರಶಸ್ತಿ

ಬೆಂಗಳೂರಿನಲ್ಲಿ ಈಚೆಗೆ ನಡೆದ ವ್ಯಾಪ್ಸ್ ಅಕ್ಷಯ ಫೌಂಡೇಷನ್ ಟ್ರಸ್ಟ್ ಬೆಳ್ಳಿಹಬ್ಬದಲ್ಲಿ ಡಾ.ಪ್ರಭಾಕರ ಕೋರೆ ಅವರಿಗೆ ವ್ಯಾಪ್ಸ್ ಗ್ರೂಪ್ ವಿದ್ಯಾವಾರೇಣ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ ಇತರರಿದ್ದರು.

Published on
ಬೆಳಗಾವಿ: ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿನ ಜಿಕೆವಿಕೆ ಆವರಣದ ಡಾ.ಬಾಬು ರಾಜೇಂದ್ರಪ್ರಸಾದ ಇಂಟರ್‌ನ್ಯಾಷನಲ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಈಚೆಗೆ ಜರುಗಿದ ವ್ಯಾಪ್ಸ್ ಅಕ್ಷಯ ಫೌಂಡೇಷನ್ ಟ್ರಸ್ಟ್ ಬೆಳ್ಳಿಹಬ್ಬದಲ್ಲಿ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅವರಿಗೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಅಮೋಘ ಕೊಡುಗೆಗೆ ವ್ಯಾಪ್ಸ್ ಗ್ರೂಪ್ ವಿದ್ಯಾವಾರೇಣ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಮೈಸೂರು ಸುತ್ತೂರುಮಠದ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಜಗದ್ಗುರು ನಿರ್ಮಲಾನಂದ ಸ್ವಾಮೀಜಿ, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಡಾ.ಪ್ರಭಾಕರ ಕೋರೆಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಪರಿತೋಷ ಕನ್ನಿಂಗ್, ಡಾ.ಅನಿಲಕುಮಾರ, ಸುನೀಲ ಶಾಸ್ತ್ರಿ ಇತರರಿದ್ದರು.
ಬೆಂಗಳೂರಿನಲ್ಲಿ ಈಚೆಗೆ ನಡೆದ ವ್ಯಾಪ್ಸ್ ಅಕ್ಷಯ ಫೌಂಡೇಷನ್ ಟ್ರಸ್ಟ್ ಬೆಳ್ಳಿಹಬ್ಬದಲ್ಲಿ ಡಾ.ಪ್ರಭಾಕರ ಕೋರೆ ಅವರಿಗೆ ವ್ಯಾಪ್ಸ್ ಗ್ರೂಪ್ ವಿದ್ಯಾವಾರೇಣ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ನಿರ್ಮಲಾನಂದ ಸ್ವಾಮೀಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net