ಸಮಯ ವ್ಯರ್ಥ ಮಾಡದೇ ಸತ್ಕಾರ್ಯಗಳಲ್ಲಿ ಪಾಲ್ಗೊಳ್ಳಿ

ಅಡಹಳ್ಳಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅಮರೇಶ್ವರ ಮಹಾರಾಜರು ಪ್ರವಚನ ನೀಡಿದರು. ಸಿದ್ದಪ್ಪ ಹೊನವಾಡ, ಬೀರಪ್ಪ ಹಾದಿಮನಿ ಇದ್ದರು.
ಅಡಹಳ್ಳಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಅಮರೇಶ್ವರ ಮಹಾರಾಜರು ಪ್ರವಚನ ನೀಡಿದರು. ಸಿದ್ದಪ್ಪ ಹೊನವಾಡ, ಬೀರಪ್ಪ ಹಾದಿಮನಿ ಇದ್ದರು.
Published on
ಅಥಣಿ ಗ್ರಾಮೀಣ: ಬಂಗಾರ, ಬೆಳ್ಳಿ, ಆಸ್ತಿಗಿಂತ ಸಂಸ್ಕಾರ ಮುಖ್ಯ ಎಂದು ಕವಲಗುಡ್ಡದ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ 5 ದಿನಗಳ ಕಾಲ ಜರುಗಲಿರುವ ಆಧ್ಯಾತ್ಮಿಕ ಪ್ರವಚನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿ, ಮಾತಿನಲ್ಲಿ ದೇವರ ನಾಮಾಮೃತ ತುಂಬಿರಬೇಕು. ಮಾತು ತುಂಬ ಮಿತವಾಗಿರಬೇಕು. ಕೇಳುಗರಿಗೆ ಹಿತವೆನಿಸಬೇಕು. ಹಣಕೊಟ್ಟು ಗಡಿಯಾರ ಕೊಂಡುಕೊಳ್ಳಬಹುದು. ಸಮಯ ಕೊಂಡುಕೊಳ್ಳಲು ಸಾಧ್ಯವಿಲ್ಲ. ಸಮಯ ವ್ಯರ್ಥ ಮಾಡದೇ ಸತ್ಕಾರ್ಯಗಳಲ್ಲಿ ಪಾಲ್ಗೊಂಡು ಜೀವನ ಸಾಗಿಸಬೇಕು. ಸದಾ ದೇವರ ನಾಮಸ್ಮರಣೆ ಮಾಡಿದರೆ ಎಂತಹ ಆಪತ್ತು ಬಂದರೂ ದೇವರು ರಕ್ಷಿಸುತ್ತಾನೆ ಎಂದರು. ಮಾಯಪ್ಪ ಹೊನವಾಡ, ಜ್ಯೋತಿ ನಾಗಠಾಣ, ದುಂಡಪ್ಪ ಮಾಯಯನಟ್ಟಿ, ಸಿದ್ದಪ್ಪ ಹೊನವಾಡ, ಬೀರಪ್ಪ ಹಾದಿಮನಿ, ಮಾಳಪ್ಪ ಪೂಜಾರಿ, ಜಗದೀಶ ಸನದಿ, ರಾಮು ಹೊನವಾಡ, ಶ್ರೀಶೈಲ ಸನದಿ, ನಿಂಗಪ್ಪ ರೂಗಿ, ಅಪ್ಪಾಸಾಬ ಕೋಹಳ್ಳಿ, ಮಹಾದೇವ ಖೋಬ್ರಿ, ಡಾ.ಭೀಮು ಬಿದರೊಳ್ಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net