ದುಶ್ಚಟಗಳಿಗೆ ಬಲಿಯಾಗದಿರಿ

ಹುಕ್ಕೇರಿ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕುರಹಿತ ದಿನಾಚರಣೆಯನ್ನು ರಾಜಣ್ಣ ಸಂಕಣ್ಣವರ ಉದ್ಘಾಟಿಸಿದರು. ಆದಿತ್ಯ ಕಲಾಲ, ಡಾ.ಉದಯ ಕುಡಚಿ, ಕೆ.ಬಿ.ಕುರಬೇಟ ಇತರರಿದ್ದರು.
ಹುಕ್ಕೇರಿ ನ್ಯಾಯಾಲಯ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕುರಹಿತ ದಿನಾಚರಣೆಯನ್ನು ರಾಜಣ್ಣ ಸಂಕಣ್ಣವರ ಉದ್ಘಾಟಿಸಿದರು. ಆದಿತ್ಯ ಕಲಾಲ, ಡಾ.ಉದಯ ಕುಡಚಿ, ಕೆ.ಬಿ.ಕುರಬೇಟ ಇತರರಿದ್ದರು.
Published on
ಹುಕ್ಕೇರಿ:
ಪಟ್ಟಣ ನ್ಯಾಯಾಲಯದ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ತಂಬಾಕುರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಿವಿಲ್ ನ್ಯಾಯಾಧೀಶ ಆದಿತ್ಯ ಕಲಾಲ ಮಾತನಾಡಿ, ತಂಬಾಕು ಸೇವಿಸುವವರು ಸ್ವಯಂ ಪ್ರೇರಿತರಾಗಿ ಬಿಡಬೇಕು ಎಂದರು.
ತಾಲೂಕು ವೈದ್ಯಾಧಿಕಾರಿ ಡಾ.ಉದಯ ಕುಡಚಿ ಮಾತನಾಡಿ, ಶಾಲಾ ವಲಯದಲ್ಲಿ ತಂಬಾಕು ಮಾರಾಟ ನಿಷೇಧವಿದ್ದು, ಸರ್ಕಾರಿ ಇಲಾಖೆ ಆವರಣ ಸುತ್ತಮುತ್ತಲೂ ತಂಬಾಕು ಮಾರಾಟವನ್ನು ನಿರ್ಬಂಧಿಸಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಬಿ.ಕುರಬೇಟ ಮಾತನಾಡಿದರು. ಜನ ಜಾಗೃತಿ ಜಾಥಾ ಮತ್ತು ಬೀದಿ ನಾಟಕ ಜರುಗಿತು. ನಂತರ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಿಇಒ ಡಾ.ಗುರು ಸುಹಾಸ ಉಪನ್ಯಾಸ ನೀಡಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಶಿವಶಂಕರ ಗಣಾಚಾರಿ, ಬಿಇಒ ಪ್ರಭಾವತಿ ಪಾಟೀಲ, ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಜಿನರಾಳಿ, ಅಪರ ಸರ್ಕಾರಿ ವಕೀಲ ಅನಿಲ ಕರೋಶಿ, ಸಂತಾನಿ ದಂಡಿನ, ವೈಜಯಂತಿ ಚೌಗಲಾ, ವಿಠ್ಠಲ ಘಸ್ತಿ, ಅಮರೇಶ ಬಾಗೇವಾಡಿ, ಅನಿತಾ ಕುಲಕರ್ಣಿ ಇತರರಿದ್ದರು. ಕಿರಣ ಚೌಗಲಾ ಸ್ವಾಗತಿಸಿ, ಚೇತನ ಕುಲಕರ್ಣಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net