ಕೆಎಲ್‌ಇ ಫಾರ್ಮಸಿ ಮಹಾವಿದ್ಯಾಲಯದ ಔಷಧ ಗುಣಮಟ್ಟ ಭರವಸೆ ವಿಭಾಗ, ಡಿಪಾರ್ಟ್‌ಮೆಂಟ್ ಆಫ್ ಫಾರ್ಮಸಿ ಎಜುಕೇಶನ್ ಆಶ್ರಯದಲ್ಲಿ ‘ಯೋಚಿಸಿ ಚರ್ಚಿಸಿ ಹಂಚಿಕೊಳ್ಳಿ: ಸಾಮಾಜಿಕ ಮತ್ತು ನೆಟ್‌ವರ್ಕಿಂಕ್ ವೇದಿಕೆಗಳ ಪಾತ್ರ’ ಎಂಬ ವಿಷಯವಾಗಿ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಪರಿಶೀಲಿಸದ ಆರೋಗ್ಯ ಹಕ್ಕುಗಳನ್ನು ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮ ವ್ಯಕ್ತಿಗಳ ಪ್ರಭಾವ ಹೆಚ್ಚುತ್ತಿರುವ ಈ ದಿನಗಳಲ್ಲಿ ವೈದ್ಯಕೀಯ ಮತ್ತು ಫಾರ್ಮಸಿ ವಿದ್ಯಾರ್ಥಿಗಳು ತುಂಬಾ ಎಚ್ಚರಿಕೆ ವಹಿಸಬೇಕಿದೆ. ಆರೋಗ್ಯ ಸಂಬಂಧಿತ ಮಾಹಿತಿ ಸ್ವೀಕರಿಸುವ ಅಥವಾ ಹಂಚಿಕೊಳ್ಳುವ ಮೊದಲು ಅಧಿಕೃತ, ಪುರಾವೆ, ಮೂಲಗಳನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು.