ರೈತರಿಗೆ ಸುಲಭವಾಗಿ ದಾಖಲೆ ಲಭ್ಯ

ಚನ್ನಮ್ಮನ ಕಿತ್ತೂರು ತಾಲೂಕು ಆಡಳಿತ ಸೌಧದಲ್ಲಿ ಯೋಜಿಸಿದ ಭೂ ಸುರಕ್ಷಾ ಯೋಜನೆ ಹಾಗೂ ದಾಖಲೆಗಳ ಡಿಜಿಟಲೀಕರಣವನ್ನು ಸಚಿವ ಡಾ.ಜಿ. ಪರಮೇಶ್ವರ ವೀಕ್ಷಿಸಿದರು. ಮೊಹಮ್ಮದ್ ರೋಷನ್, ಕಲಗೌಡ ಪಾಟೀಲ, ನಾನಾಸಾಹೇಬ ಪಾಟೀಲ,ಜೈಸಿದ್ಧ್ದರಾಮ ಮಾರಿಹಾಳ ಇತರರಿದ್ದರು.
ಚನ್ನಮ್ಮನ ಕಿತ್ತೂರು ತಾಲೂಕು ಆಡಳಿತ ಸೌಧದಲ್ಲಿ ಯೋಜಿಸಿದ ಭೂ ಸುರಕ್ಷಾ ಯೋಜನೆ ಹಾಗೂ ದಾಖಲೆಗಳ ಡಿಜಿಟಲೀಕರಣವನ್ನು ಸಚಿವ ಡಾ.ಜಿ. ಪರಮೇಶ್ವರ ವೀಕ್ಷಿಸಿದರು. ಮೊಹಮ್ಮದ್ ರೋಷನ್, ಕಲಗೌಡ ಪಾಟೀಲ, ನಾನಾಸಾಹೇಬ ಪಾಟೀಲ,ಜೈಸಿದ್ಧ್ದರಾಮ ಮಾರಿಹಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಜಿ.ಪರಮೇಶ್ವರ ಮಾಹಿತಿ
  • ಭೂ ಸುರಕ್ಷಾ ಯೋಜನೆ ಡಿಜಿಟಲೀಕರಣ
ಕಿತ್ತೂರು: ಕೋಟ್ಯಂತರ ದಾಖಲೆ ಸುಲಭವಾಗಿ ರೈತರಿಗೆ ಲಭ್ಯವಾಗುವ ನಿಟ್ಟಿನಲ್ಲಿ ಚನ್ನಮ್ಮನ ಕಿತ್ತೂರಿನಲ್ಲಿ ಮೊದಲ ಬಾರಿಗೆ ಡಿಜಿಟಲ್ ಟೆಕ್ನಾಲಜಿ ಬಳಸಲಾಗಿದೆ. ಇದರಿಂದ ಜನರಿಗೆ ಸುಲಭವಾಗಿ ದಾಖಲೆ ದೊರೆಯಲು ಅನುಕೂಲವಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದರು.
ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭೂ ಸುರಕ್ಷಾ ಯೋಜನೆ ಹಾಗೂ ದಾಖಲೆಗಳ ಡಿಜಿಟಲೀಕರಣ ವೀಕ್ಷಿಸಿ ಮಾತನಾಡಿದರು. ಸಂಗೊಳ್ಳಿ ರಾಯಣ್ಣ ರಾಕ್ ಗಾರ್ಡನ್‌ಗೆ ನೂರಾರು ಕೋಟಿ ರೂ. ಅನುದಾನ ಸಿಕ್ಕಿದೆ. ಆದರೆ, ರಾಣಿ ಚನ್ನಮ್ಮಾಜಿ ಕಿತ್ತೂರು ಅಭಿವೃದ್ಧಿಯ ಅನುದಾನ ವಿಷಯದಲ್ಲಿ ತಾರತಮ್ಯವಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಸರಿ ಮಾಡೋಣ ಎಂದು ಸಚಿವರು ಉತ್ತರಿಸಿದರು.
ಬೆಳಗಾವಿ ಜಿಲ್ಲೆ ಬರಪೀಡಿತ ಪ್ರದೇಶ ಎಂದು ಘೋಷಿಸಬೇಕೆಂದು ಆಗ್ರಹಿಸಿ ಕಿತ್ತೂರು ಕರ್ನಾಟಕ ರೈತ ಜಾಗೃತ ಸಂಘದ ಅಧ್ಯಕ್ಷ ಎಂ.ಎ್.ಜಕಾತಿ ಹಾಗೂ ಸದಸ್ಯರು ಸಚಿವ ಡಾ.ಜಿ. ಪರಮೇಶ್ವರಗೆ ಮನವಿ ಸಲ್ಲಿಸಿದರು.
ಇದಕ್ಕೂ ಮೊದಲು ಸಚಿವ ಪರಮೇಶ್ವರ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಾಣಿ ಚನ್ನಮ್ಮಾಜಿ, ಕಾಂತ್ರೀವೀರ ಸಂಗೊಳ್ಳಿ ರಾಯಣ್ಣ ಹಾಗೂ ಅಮಟೂರು ಬಾಳಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಕಂದಾಯ ಇಲಾಖೆಯ ರಾಜೇಂದ್ರ ಕಠಾರಿ, ಕಂದಾಯ ಇಲಾಖೆಯ ಮೀನಾ ನಾಗರಾಜ, ಸರ್ಕಾರದ ಉಪ ಮುಖ್ಯ ಕಾರ್ಯದರ್ಶಿ ಮನೋಜ ಮೀನಾ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ತಹಸೀಲ್ದಾರ್ ಕಲಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ನಾನಾಸಾಹೇಬ ಪಾಟೀಲ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈಸಿದ್ಧ್ದರಾಮ ಮಾರಿಹಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net