

ಬೆಳಗಾವಿ :
ಡಿ.ಕೆ.ಶಿವಕುಮಾರ ಮತ್ತೊಂದು ಹೆಸರೇ ಭ್ರಷ್ಟಾಚಾರ. ಓರ್ವ ಭ್ರಷ್ಟಾಚಾರಿ ತನ್ನ ಜತೆಗೆ ಸಹಜವಾಗಿ ಭ್ರಷ್ಟಾಚಾರಿಯನ್ನೇ ಇಟ್ಟುಕೊಳ್ಳಲು ಬಯಸುತ್ತಾನೆ. ಹೀಗಾಗಿಯೇ ಸಿದ್ದರಾಮಯ್ಯ ರಾಜೀನಾಮೆ ತೆಗೆದುಕೊಂಡಿದ್ದ ಬಿ.ನಾಗೇಂದ್ರ ನಿರ್ದೋಷಿಯಾಗುವ ಮುಂಚೆಯೇ ಡಿಕೆಶಿ ಸಚಿವ ಸ್ಥಾನ ನೀಡಿದ್ದಾರೆ ಎಂದು ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.
ಕಾಂಗ್ರೆಸ್ ಎಂದರೆ ನೋ ಪೊಗ್ರೆಸ್(ಪ್ರಗತಿ ಶೂನ್ಯ) ಸರ್ಕಾರವಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ ಮಾಡಿದ್ದ ಎಲ್ಲ ಪ್ರಗತಿಯನ್ನೂ ಇವರು ಮೂರೇ ವರ್ಷದಲ್ಲಿ ಹಾಳು ಮಾಡಿಟ್ಟಿದ್ದಾರೆ. ಜನರ ಜೀವನ ಸುಧಾರಿಸುವ ಕಾಳಜಿ ಇವರಿಗಿಲ್ಲ ಇಲ್ಲ. ಸಚಿವ ಸ್ಥಾನದ ಜಗಳದಲ್ಲೇ ಮುಳುಗಿ ಹೋಗಿದ್ದು, ಈ ಭ್ರಷ್ಟ ಸರ್ಕಾರ ತೊಲಗಿಸಬೇಕಿದೆ.
— ಡಾ.ಸೋನಾಲಿ ಸರ್ನೋಬತ್, ಬಿಜೆಪಿ ಮಹಿಳಾ ರಾಜ್ಯ ಮೋರ್ಚಾ ಕಾರ್ಯದರ್ಶಿ