ಸದಸ್ಯರಿಗೆ ಶೇ.25 ಲಾಭಾಂಶ ಹಂಚಿಕೆ

ಐನಾಪುರ ದಿ.ಕೃಷ್ಣಾ ಕಿತ್ತೂರ ಕೋ-ಆಪ್ ಕ್ರೆಡಿಟ್ ಸೊಸೈಟಿ ಕಾರ್ಯಾಲಯದಲ್ಲಿ ಅಧ್ಯಕ್ಷ ದೊಂಡಿರಾಮ ಪವಾರ ಅವರನ್ನು ಸನ್ಮಾನಿಸಲಾಯಿತು. ಕಲ್ಲಪ್ಪ ಕರಗಾರ, ವಿದ್ಯಾಧರ ಸುತಾರ, ಸಂಜಯ ಪಾಟೀಲ ಇತರರಿದ್ದರು.
ಐನಾಪುರ ದಿ.ಕೃಷ್ಣಾ ಕಿತ್ತೂರ ಕೋ-ಆಪ್ ಕ್ರೆಡಿಟ್ ಸೊಸೈಟಿ ಕಾರ್ಯಾಲಯದಲ್ಲಿ ಅಧ್ಯಕ್ಷ ದೊಂಡಿರಾಮ ಪವಾರ ಅವರನ್ನು ಸನ್ಮಾನಿಸಲಾಯಿತು. ಕಲ್ಲಪ್ಪ ಕರಗಾರ, ವಿದ್ಯಾಧರ ಸುತಾರ, ಸಂಜಯ ಪಾಟೀಲ ಇತರರಿದ್ದರು.
Published on

ಐನಾಪುರ: ದಿ.ಕೃಷ್ಣಾ ಕಿತ್ತೂರ ಕೋ-ಆಪ್ ಕ್ರೆಡಿಟ್ ಸೊಸೈಟಿ ಪ್ರಸಕ್ತ ವರ್ಷದಲ್ಲಿ 50,73,973 ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ದೊಂಡಿರಾಮ ಪವಾರ ಹೇಳಿದರು.

ಗ್ರಾಮದ ದಿ.ಕೃಷ್ಣಾ ಕಿತ್ತೂರ ಕೋ-ಆಪ್ ಕ್ರೆಡಿಟ್ ಸೊಸೈಟಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ಆರ್ಥಿಕ ವರ್ಷಕ್ಕೆ 50,44,56,262 ರೂ. ದುಡಿಯುವ ಬಂಡವಾಳ, 40,15,22,897 ರೂ. ಠೇವಣಿ, 33,40,78,506 ರೂ. ವಿವಿಧ ಸಾಲ ನೀಡಿದ್ದು, ಸದಸ್ಯರಿಗೆ ಶೇ.25 ಲಾಭಾಂಶ ವಿತರಿಸಲಾಗುವುದು ಎಂದರು.
ಅಧ್ಯಕ್ಷ ದೊಂಡಿರಾಮ ಪವಾರ, ನಿರ್ದೇಶಕ ಕಲ್ಲಪ್ಪ ಕರಗಾರ ಅವರನ್ನು ಸನ್ಮಾನಿಸಲಾಯಿತು. ಸಂಘದ ಗೌರವ ಅಧ್ಯಕ್ಷ ರಮೇಶ ಮಾಳಿ, ಶ್ರೀಕಾಂತ ಕಾಂಬಳೆ, ಸಂಗಪ್ಪ ಪಾಟೀಲ, ಮಹಾಂತೇಶ ಮದನೆ, ವಿದ್ಯಾಧರ ಸುತಾರ, ಅಪ್ಪಾಸಾಬ ಮಗದುಮ್ಮ, ಗಣಪತಿ ಕಾಕಣಕಿ, ಬಾಳಾಸಾಬ ಖಾಮಕರ, ಭಗವಂತ ನಾಯಿಕ, ರಾಮಾ ಯಂಡೋಳಿ, ಸವಿತಾ ಜಂಬಗಿ, ನೀಲವ್ವ ಪಾಟೀಲ, ರಾಜು ಪಾಟೀಲ, ಪಿಂಟು ಪಾಟೀಲ, ಗೀತಾ ಪೂಜಾರಿ, ಈರಣ್ಣ ಉಗಾರೆ, ವಿರೂಪಾಕ್ಷಿ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net