ಸಂಸ್ಕಾರದ ಗಂಗಾ ಸ್ನಾನ ಪ್ರವಚನ

ತೆಲಸಂಗದ ಶ್ರೀ ಸಿದ್ಧರಾಮೇಶ್ವರ ಮಠದಲ್ಲಿ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ವೀರೇಶ್ವರ ದೇವರು, ಬಸವಲಿಂಗ ಸ್ವಾಮೀಜಿ, ಬಸವ ಗುಂಡಯ್ಯ ಸ್ವಾಮೀಜಿ ಇತರರಿದ್ದರು.
ತೆಲಸಂಗದ ಶ್ರೀ ಸಿದ್ಧರಾಮೇಶ್ವರ ಮಠದಲ್ಲಿ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ವೀರೇಶ್ವರ ದೇವರು, ಬಸವಲಿಂಗ ಸ್ವಾಮೀಜಿ, ಬಸವ ಗುಂಡಯ್ಯ ಸ್ವಾಮೀಜಿ ಇತರರಿದ್ದರು.
Published on
ತೆಲಸಂಗ: ಪ್ರವಚನ ಜೀವನದ ಕಹಿ ಹೋಗಲಾಡಿಸಿ ಸವಿ ತುಂಬುವ ಸಂಸ್ಕಾರದ ಗಂಗಾ ಸ್ನಾನ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಗ್ರಾಮದ ಸಿದ್ಧರಾಮೇಶ್ವರ ಮಠದಲ್ಲಿ ಹಮ್ಮಿಕೊಂಡಿರುವ ಹುಬ್ಬಳ್ಳಿ ಸಿದ್ಧಾರೂಢರ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಏ.2ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಪ್ರವಚನ ನಡೆಯುವುದು. ಸಿದ್ಧಾರೂಢರ ಜೀವನ ಚರಿತ್ರೆ ಅಧ್ಯಾತ್ಮ ಮತ್ತು ಸಮಾನತೆಯ ಪಾಠ ಕಲಿಸುತ್ತದೆ ಎಂದರು.
ವಿರಕ್ತಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಜ್ಞಾನಕ್ಕಿಂತ ಪವಿತ್ರವಾದದ್ದು ಬೇರೊಂದಿಲ್ಲ. ಮನುಷ್ಯನಿಗೆ ಅನ್ನದ ಹಸಿವಿಗಿಂತ, ಅರಿವಿನ ಹಸಿವು ಹೆಚ್ಚಿರಬೇಕು ಎಂದರು. ಕುಂಬಾರ ಗುರುಪೀಠದ ಬಸವ ಗುಂಡಯ್ಯ ಸ್ವಾಮೀಜಿ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net