ಒಟ್ಟು 24 ವಾರ ಕಠಿಣ ಮಿಲಿಟರಿ ತರಬೇತಿ ಅಧಿಕೃತವಾಗಿ ಮುಕ್ತಾಯಗೊಳಿಸಿರುವ 765 ಅಗ್ನಿವೀರರು ವಿವಿಧ ಧರ್ಮ ಗ್ರಂಥಗಳು, ರಾಷ್ಟ್ರಧ್ವಜ, ಎಂಎಲ್‌ಐಆರ್‌ಸಿ ಧ್ವಜದ ಸಾಕ್ಷಿಯಾಗಿ ದೇಶಸೇವೆಯ ಪ್ರಮಾಣ ವಚನ ಸ್ವೀಕರಿಸಿದರು. ಅಗ್ನಿವೀರ ಸಂಕೇತ ಸಿಂಗ್ ಪೆರೇಡ್ ಮುನ್ನಡೆಸಿದರು. ಮೇಜರ್ ಗಜಾನನ ಪಾಟೀಲ ಪೆರೇಡ್ ಅಡ್ಜುಟೆಂಟ್ ಕಾರ್ಯನಿರ್ವಹಿಸಿದರು. ತರಬೇತಿ ಅವಧಿಯಲ್ಲಿನ ಅತ್ಯುತ್ತಮ ಅಗ್ನಿವೀರ ಆಗಿ ಹೊರಹೊಮ್ಮಿದ ಘೋಲಪ್ ಆದರ್ಶಗೆ ‘ನಾಯ್ಕ ಯಶವಂತ ಗಾಡಗೆ-ವಿಕ್ಟೋರಿಯಾ ಕ್ರಾಸ್ ಮೆಡಲ್’ ನೀಡಲಾಯಿತು