ಆಹಾರ ಪದಾರ್ಥಗಳಿಂದ ಹಿಡಿದು, ಗ್ರಾಹಕರಿಗೆ ಬೇಕಾಗುವ ವಿವಿಧ ಉತ್ಪನ್ನ ತಯಾರಿಸಿ ಅನೇಕ ಮಹಿಳೆಯರು ಮಾರುತ್ತಿದ್ದಾರೆ. ಆದರೆ ಕೆಲವರಿಗೆ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಗೊತ್ತಿಲ್ಲ. ಕೆಲವರು ಏಜೆಂಟರ ಮೂಲಕ ತಮ್ಮ ಉತ್ಪನ್ನ ಮಾರುತ್ತಾರೆ. ಈಗ ಏಜೆಂಟರಿಂದ ತಪ್ಪಿಸಿಕೊಂಡು ತಮ್ಮ ಉತ್ಪನ್ನಗಳನ್ನು ನೇರವಾಗಿ ಆನ್‌ಲೈನ್‌ನಲ್ಲಿ ಮಾರಲು ಇರುವ ಅವಕಾಶಗಳ ಬಗ್ಗೆ ಕಲಿಸಿಕೊಡಲಾಗುವುದು. ಕೇಂದ್ರ ಸರ್ಕಾರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮತ್ತು ಬೆಂಗಳೂರಿನ ಮಹಿಳಾ ಉದ್ಯಮಗಳ ಸಂಘ ಕಾರ್ಯಾರ್ಗಾರಕ್ಕೆ ಸಹಯೋಗ ನೀಡಿದೆ ಎಂದು ವಿವರಿಸಿದರು.