ಧ್ಯಾನ್‌ಚಂದ್ ಸಾಧನೆ ಅಮೋಘ

ಚಿಕ್ಕೋಡಿ ತಾಲೂಕಿನ ಶಮನೇವಾಡಿ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು.  ಡಾ.ಸಂಜಯ ಅಂಕಲಿ, ರವಿ ವಾಳಕೆ, ಡಾ.ಸಚಿನ ಮೆಕ್ಕಳಕಿ, ಡಾ.ಶಶಿಕಾಂತ ವಾಳಕಿ, ಕೆ.ಆರ್ . ಪಾಟೀಲ, ಪ್ರಶಾಂತ ಶೇಡಬಾಳಕರ, ಅಭಿಜಿತ ಅಕಿವಾಟೆ, ಅಶ್ವಿನಿ ಫರಾಳದ, ಸ್ನೇಹಾ ವಾಳಕಿ ಇತರರಿದ್ದರು.
ಚಿಕ್ಕೋಡಿ ತಾಲೂಕಿನ ಶಮನೇವಾಡಿ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಯಿತು. ಡಾ.ಸಂಜಯ ಅಂಕಲಿ, ರವಿ ವಾಳಕೆ, ಡಾ.ಸಚಿನ ಮೆಕ್ಕಳಕಿ, ಡಾ.ಶಶಿಕಾಂತ ವಾಳಕಿ, ಕೆ.ಆರ್ . ಪಾಟೀಲ, ಪ್ರಶಾಂತ ಶೇಡಬಾಳಕರ, ಅಭಿಜಿತ ಅಕಿವಾಟೆ, ಅಶ್ವಿನಿ ಫರಾಳದ, ಸ್ನೇಹಾ ವಾಳಕಿ ಇತರರಿದ್ದರು.
Published on

ಚಿಕ್ಕೋಡಿ:

ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಯಬೇಕಿದೆ. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಮುಖ್ಯ ಎಂದು ಎಜಿಎಂ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಸಂಜಯ ಅಂಕಲಿ ಅಭಿಪ್ರಾಯಪಟ್ಟರು.

ತಾಲೂಕಿನ ಶಮನೇವಾಡಿ ಎಜಿಎಂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಅವರ 135ನೇ ಜನ್ಮದಿನದ ನಿಮಿತ್ತ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಸತತ ಅಭ್ಯಾಸ ಪ್ರಮುಖ ಪಾತ್ರವಹಿಸುತ್ತದೆ. ಧ್ಯಾನಚಂದ ಕಠಿಣ ಶ್ರಮದಿಂದ ಸಾಧನೆಗೈದಿದ್ದಾರೆ. ಭಾರತ ಒಲಿಂಪಿಕ್ಸ್‌ನಲ್ಲಿ ಸತತ 3 ಬಾರಿ ಹಾಕಿಯಲ್ಲಿ ಚಿನ್ನದ ಪದಕ ಪಡೆಯುವಲ್ಲಿ ಧ್ಯಾನ್‌ಚಂದ್ ಪಾತ್ರ ಅಮೋಘವಾದದ್ದು. ಧ್ಯಾನ್‌ಚಂದ್ ಅಪ್ಪಟ ದೇಶಾಭಿಮಾನಿ. ನನ್ನನ್ನು ಮುಂದೆ ತರುವುದು ದೇಶದ ಜವಾಬ್ದಾರಿಯಲ್ಲ. ಆದರೆ, ದೇಶವನ್ನು ಮುಂದೆ ತರುವುದು ನನ್ನ ಜವಾಬ್ದಾರಿ ಎಂದು ಹಿಟ್ಲರ್‌ಗೆ ಪ್ರತ್ಯುತ್ತರ ನೀಡಿದ ಮಹಾನ್ ಕ್ರೀಡಾಪಟು ಎಂದು ಶ್ಲಾಘಿಸಿದರು.
ಕೇಂದ್ರ ಸರ್ಕಾರ ಖೇಲೋ ಇಂಡಿಯಾ ಹಾಗೂ ಫಿಟ್ ಇಂಡಿಯಾ ಮೂಲಕ ಯುವ ಪೀಳಿಗೆಯನ್ನು ಆಟಗಳಲ್ಲಿ ತೋಡಗಿಕೊಳ್ಳಲೂ ಪ್ರೋತ್ಸಾಹಿಸುತ್ತಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ರವಿ ವಾಳಕೆ, ಡಾ.ಸಚಿನ ಮೆಕ್ಕಳಕಿ, ಡಾ.ಶಶಿಕಾಂತ ವಾಳಕಿ, ಕೆ.ಆರ್.ಪಾಟೀಲ, ಪ್ರಶಾಂತ ಶೇಡಬಾಳಕರ, ಅಭಿಜಿತ ಅಕಿವಾಟೆ, ಅಶ್ವಿನಿ ಫರಾಳದ, ಸ್ನೇಹಾ ವಾಳಕಿ, ಅಶ್ವಿನಿ ಮೋನಾಚಾರ್ಯ, ರಾಣಿ ಸುಟುರೆ, ಮುತ್ತಣ್ಣಾ ಗೋಳಪ್ಪಗೋಳ, ಪೀರಗೌಡ ಹುಳಿಕೊಪ್ಪೆ, ಕೈಫ್ ಮುಲ್ಲಾ, ಶ್ವೇತಾ ಹವಾಲ್ದಾರ, ಕಾವೇರಿ ಕಡೆಮನಿ, ಸ್ವಯಂ ಶಾಮ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net