ಬೆಳಗಾವಿ: ಇಲ್ಲಿನ ಗೋಗಟೆ ಪಿಯು ಕಾಲೇಜಿನ ವಿದ್ಯಾರ್ಥಿನಿ ಧ್ವನಿ ಸಂತೋಷ ಕುಲಕರ್ಣಿ.ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 600ಕ್ಕೆ 599 ಅಂಕ.ಪಡೆದು ರಾಜ್ಯಕ್ಕೆ ದ್ವಿತೀಯ, ಜಿಲ್ಲೆಗೆ ಪ್ರಥಮ ಸ್ಥಾನ.ಪಡೆದಿದ್ದಾರೆ..ಸಂಸ್ಕೃತ, ಬಿಜಿನೆಸ್ ಸ್ಟಡೀಸ್, ಅಕೌಂಟನ್ಸಿ.ಹಾಗೂ ಬೇಸಿಕ್ ಮ್ಯಾಥ್ಸ್‌ನಲ್ಲಿ ನೂರಕ್ಕೆ ನೂರು ಅಂಕ.ಪಡೆದಿರುವ ಧ್ವನಿ, ಇಂಗ್ಲಿಷ್‌ನಲ್ಲಿ 99 ಅಂಕ ಪಡೆದಿದ್ದಾರೆ..ವೃತ್ತಿಪರ ತಬಲಾ ಕಲಾವಿದರಾಗಿರುವ ಅವರ ತಂದೆ.ಸಂತೋಷ ಕುಲಕರ್ಣಿ ದೋಹಾ ಕತಾರ್‌ನ ಸ್ಕಿಲ್ಸ್.ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಸಂಗೀತಗಾರರಾಗಿ.ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಪಲ್ಲವಿ ಕುಲಕರ್ಣಿ ಗೃಹಿಣಿ..ಅಕ್ಕನ ಪ್ರೇರಣೆ: ಅಕ್ಕ ಸ್ವರ ಕೂಡ ಗೋಗಟೆ ಕಾಲೇಜಿನಲ್ಲೇ ಓದಿದ್ದು 2023ರಲ್ಲಿ.ದ್ವಿತೀಯ ಪಿಯುಸಿಯಲ್ಲಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ಟಾಪ್ 10ನಲ್ಲಿ ಸ್ಥಾನ.ಪಡೆದಿದ್ದರು. ಪ್ರಸ್ತುತ ಸಿಎ ಫೈನಲ್ ಓದುತ್ತಿರುವ ಅಕ್ಕನ ಮಾರ್ಗದರ್ಶನವೇ.ಧ್ವನಿಯ ಈ ಯಶಸ್ಸಿನ ಗುಟ್ಟು..ಅಜ್ಜನಿಗೆ ಸಮರ್ಪಣೆ: ಧ್ವನಿಯ ಸಾಧನೆ ಹಿಂದೆ ಭಾವುಕ ಕಥೆಯಿದೆ. ಅಜ್ಜ.(ತಾಯಿಯ ತಂದೆ) ಕೆ.ಎಲ್.ಕೃಷ್ಣಮೂರ್ತಿ ಚಿಕ್ಕ ಮೊಮ್ಮಗಳು ಅಕ್ಕನಂತೆಯೇ.ರಾಜ್ಯಮಟ್ಟಕ್ಕೆ ರ‌್ಯಾಂಕ್ ಪಡೆಯಬೇಕೆಂದು ಆಸೆಪಟ್ಟಿದ್ದರಂತೆ. ಖಂಡಿತ ಆಸೆ.ಈಡೇರಿಸುತ್ತೇನೆ ಎಂದು ಅಜ್ಜನಿಗೆ ಮಾತು ಕೊಟ್ಟಿದ್ದೆ. ಆದರೆ ಈ ಕ್ಷಣದಲ್ಲಿ ಅವರಿಲ್ಲ.ಎನ್ನುವುದೇ ದುಃಖದ ಸಂಗತಿ ಎಂದಿರುವ ಧ್ವನಿ, ನನ್ನ ಸಾಧನೆಯನ್ನು ಅಜ್ಜನಿಗೆ.ಸಮರ್ಪಿಸುವುದಾಗಿ ಹೇಳಿದ್ದಾರೆ..ಮುಂದಿನ ಗುರಿ: ಲೆಕ್ಕ ಪರಿಶೋಧಕಿಯಾಗುವ ಗುರಿ ಇದೆ. ಸಿಎ ಆಗುವುದು.ಸವಾಲಿನ ಕೆಲಸ. ನನಗೆ ಸವಾಲುಗಳೆಂದರೆ ಇಷ್ಟ, ಹಾಗಾಗಿ ಈ ಕ್ಷೇತ್ರವನ್ನು.ಆರಿಸಿಕೊಂಡಿದ್ದೇನೆ. ಈಗಾಗಲೇ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ.ಎಂದು ಧ್ವನಿ ವಿಜಯವಾಣಿಗೆ ತಿಳಿಸಿದ್ದಾರೆ.