ಧೂಪದಾಳ ಗ್ರಾಮದೇವಿಯರ ಜಾತ್ರೆ ಇಂದು

ಧೂಪದಾಳ ಗ್ರಾಮದೇವಿಯರು
ಧೂಪದಾಳ ಗ್ರಾಮದೇವಿಯರು
Published on
ಯಕ್ಕುಂಡಿ: ಧೂಪದಾಳ ಗ್ರಾಮದಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವಿಯರ ಜಾತ್ರೋತ್ಸವ ಜೂ.25ರಿಂದ 29ರವರೆಗೆ ಜರುಗಲಿದೆ. ಜೂ.25ರಂದು ಬೆಳಗ್ಗೆ ರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ, ಮಾಂಗಲ್ಯಧಾರಣೆ ಮತ್ತು ಅಕ್ಷತಾರೋಪಣ ನೆರವೇರಲಿದೆ.
ಬಳಿಕ ದೈವದ ವತಿಯಿಂದ ಉಡಿ ತುಂಬುವುದು, ಮುತ್ತೈದೆಯರಿಗೆ ಕಂಕಣ ಕಟ್ಟುವುದು, ಹೊನ್ನಾಟ ಜರುಗಲಿದೆ. ಸಂಜೆ 4ಗಂಟೆಗೆ ನಡೆಯುವ ಧರ್ಮಸಭೆಯ ಸಾನ್ನಿಧ್ಯವನ್ನು ಯಕ್ಕುಂಡಿ ಕುಮಾರೇಶ್ವರ ವಿರಕ್ತಮಠದ ಪಂಚಾಕ್ಷರ ಸ್ವಾಮೀಜಿ ವಹಿಸಲಿದ್ದಾರೆ.
ಯಕ್ಕುಂಡಿ ಕುಮಾರೇಶ್ವರ ವಿರಕ್ತಮಠದ ಶಿವಪ್ರಸಾದ ದೇವರು, ಶಾಸಕ ಮಹಾಂತೇಶ ಕೌಜಲಗಿ, ಶಾಸಕ ವಿಶ್ವಾಸ ವೈದ್ಯ, ಮಾಜಿ ಶಾಸಕರಾದ ಜಗದೀಶ ಮೆಟಗುಡ್ಡ, ಡಾ.ವಿಶ್ವನಾಥ ಪಾಟೀಲ, ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಪಾಲ್ಗೊಳ್ಳಲಿದ್ದಾರೆ.
ಜೂ.26ರಂದು ಬೆಳಗ್ಗೆ ಉಡಿ ತುಂಬುವ ಕಾರ್ಯಕ್ರಮ, ಹೊನ್ನಾಟ ಜರುಗಲಿದೆ. ರಾತ್ರಿ 10ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶನಗೊಳ್ಳಲಿದೆ.
ಜೂ.27ರಂದು ಬೆಳಗ್ಗೆ ಉಡಿ ತುಂಬುವ ಕಾರ್ಯಕ್ರಮ, ಹೊನ್ನಾಟ, ರಾತ್ರಿ 10ಗಂಟೆಗೆ ಡೊಳ್ಳಿನ ಪದ, ಜೂ.28ರಂದು ಬೆಳಗ್ಗೆ ಉಡಿ ತುಂಬುವ ಕಾರ್ಯಕ್ರಮ, ಹೊನ್ನಾಟ, ರಾತ್ರಿ 10ಕ್ಕೆ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಜೂ.29ರಂದು ಬೆಳಗ್ಗೆ ಉಡಿ ತುಂಬುವ ಕಾರ್ಯಕ್ರಮ, ಹೊನ್ನಾಟ, ಬಳಿಕ ಮಹಾಪ್ರಸಾದ ನಡೆಯಲಿದೆ ಎಂದು ಧೂಪದಾಳ ಜಾತ್ರಾ ಉತ್ಸವ ಕಮಿಟಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net