ಧರ್ಮಸಂಸ್ಕಾರ ಅಭಿಯಾನ ನಾಡಿದ್ದು

ರಾಯಬಾಗ ಪಟ್ಟಣದ ಹುಕ್ಕೇರಿ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಮಾಡಲಾಯಿತು. ಡಾ.ಚಂದ್ರಶೇಖರ ಶಿವಾಚಾರ್ಯರು, ಅರುಣ ಐಹೊಳೆ, ಎಸ್.ಎಸ್.ಕಾಂಬಳೆ ಇತರರಿದ್ದರು.
ರಾಯಬಾಗ ಪಟ್ಟಣದ ಹುಕ್ಕೇರಿ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಮಾಡಲಾಯಿತು. ಡಾ.ಚಂದ್ರಶೇಖರ ಶಿವಾಚಾರ್ಯರು, ಅರುಣ ಐಹೊಳೆ, ಎಸ್.ಎಸ್.ಕಾಂಬಳೆ ಇತರರಿದ್ದರು.
Published on

ರಾಯಬಾಗ: ಹುಕ್ಕೇರಿ ಹಿರೇಮಠ ಸಂಸ್ಥಾನದಲ್ಲಿ ಜಾತ್ರಾ ಮಹೋತ್ಸವ ದಶಮಾನೋತ್ಸವ ಸಂಭ್ರಮವನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಶ್ರೀಮಠದ ಡಾ.ಚಂದ್ರಶೇಖರ ಶಿವಾಚಾರ್ಯ ನೇತೃತ್ವದಲ್ಲಿ ‘ಶ್ರೀಗಳ ನಡೆ-ಶಿಷ್ಯರ ಕಡೆ’ ಮನೆಮನೆಗೆ ಧರ್ಮಸಂಸ್ಕಾರ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅರುಣ ಐಹೊಳೆ ಹೇಳಿದರು.

ಹುಕ್ಕೇರಿ ಹಿರೇಮಠ ಸಂಸ್ಥಾನದ ಶಾಖಾ ಮಠದಲ್ಲಿ ಶುಕ್ರವಾರ ಜಾತ್ರಾ ಮಹೋತ್ಸವ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಸೆ.1ರಿಂದ 6ರವರೆಗೆ ತಾಲೂಕಿನ ಹತ್ತು ಭಾಗಗಳಿಗೆ ಶ್ರೀಗಳು ಹಾಗೂ ಅನೇಕ ಹರ-ಗುರು ಚರಮೂರ್ತಿಗಳು ಭಕ್ತರ ಮನೆಗೆ ತೆರಳಿ ಧರ್ಮ, ಸಂಸ್ಕೃತಿ ಮತ್ತು ಭಾರತೀಯ ಪರಂಪರೆಯ ಸಂದೇಶ ಕೊಂಡೊಯ್ಯಲಿದ್ದಾರೆ. ಶ್ರೀಗಳೇ ಶಿಷ್ಯರ ಮನೆ ಬಾಗಿಲಿಗೆ ತೆರಳುತ್ತಿರುವುದು ಅಭಿಯಾನದ ವಿಶೇಷ ಎಂದರು.

ಹುಕ್ಕೇರಿ ಹಿರೇಮಠದ ಡಾ.ಚಂದ್ರಶೇಖರ ಶಿವಾಚಾರ್ಯ ಮಾತನಾಡಿ, ಜಾತ್ರಾ ಮಹೋತ್ಸವದ ಅಂಗವಾಗಿ ಸೆ.6ರಂದು 11 ದೇವರುಗಳ ಪಲ್ಲಕ್ಕಿ ಉತ್ಸವ ಹಾಗೂ ಶ್ರೀಗಳ ಕಿರೀಟ ಪೂಜೆ ನಡೆಯಲಿದೆ. ಶಾಸಕ ದುರ್ಯೋಧನ ಐಹೊಳೆ ಅಧ್ಯಕ್ಷತೆ ವಹಿಸುವರು ಎಂದರು.

ಎಸ್.ಎಸ್.ಕಾಂಬಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಸಂಗಣ್ಣ ದತ್ತವಾಡೆ, ಬಸವರಾಜ ಡೋಣವಾಡೆ, ಬಿ.ಬಿ.ಪೂಜಾರ, ಭೋಲಾ ಕಡಾಳೆ, ವಸಂತ ಲಬ್ಬೆ, ನಾರಾಯಣ ಮೇತ್ರಿ, ರಿತೇಶ ಅವಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net