ಬೆಳಗ್ಗೆ ಸ್ವಯಂಭು ಹನುಮಾನ ತೊಟ್ಟಿಲೋತ್ಸವ, ಮಹಾಭಿಷೇಕ ಹಾಗೂ ವಿಶೇಷ ಅಲಕಾಂರ, ಪೂಜೆ ಜರುಗಿತು. ಸ್ವಯಂಭು ಹನುಮ ದೇವರ ದರ್ಶನ ಪಡೆಯಲು ರಾತ್ರಿ 3 ಗಂಟೆಯಿಂದ ಅಥಣಿ, ತಾಲೂಕಿನ ಸಂಕೋನಟ್ಟಿ, ರಡ್ಡೇರಹಟ್ಟಿ, ಚಿಕ್ಕಟ್ಟಿ, ಕರ್ಲಟ್ಟಿ, ಹಲ್ಯಾಳ, ದರೂರ, ನದಿ ಇಂಗಳಗಾಂವ, ಸಪ್ತಸಾಗರ, ಸಂಕ್ರಟ್ಟಿ, ಶೇಗುಣಶಿ, ಖವಟಕೊಪ್ಪ ಸೇರಿದಂತೆ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು. ಬೆಳಗ್ಗೆ 6ರಿಂದ 9ರವರೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.