ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿ ಬೆಳೆಸಿಕೊಳ್ಳಿ

ಬೆಳಗಾವಿ ವಿಟಿಯು ವ್ಯಾಪ್ತಿಯ ಕ್ರೀಡಾ ಸಾಧಕರನ್ನು ಶುಕ್ರವಾರ ಪೋತ್ಸಾಹಿಸಿ, ಅಭಿನಂದಿಸಲಾಯಿತು. ಪ್ರೊ.ಎಸ್.ವಿದ್ಯಾಶಂಕರ, ಡಾ.ಪ್ರಸಾದ ರಾಂಪುರೆ, ಪ್ರೊ.ಯು.ಜೆ.ಉಜ್ವಲ, ಡಾ.ಪ್ರಶಾಂತ ನಾಯಕ, ಡಾ.ವೈ.ಎಚ್.ರಾಜೇಶ ಇತರರಿದ್ದರು.
ಬೆಳಗಾವಿ ವಿಟಿಯು ವ್ಯಾಪ್ತಿಯ ಕ್ರೀಡಾ ಸಾಧಕರನ್ನು ಶುಕ್ರವಾರ ಪೋತ್ಸಾಹಿಸಿ, ಅಭಿನಂದಿಸಲಾಯಿತು. ಪ್ರೊ.ಎಸ್.ವಿದ್ಯಾಶಂಕರ, ಡಾ.ಪ್ರಸಾದ ರಾಂಪುರೆ, ಪ್ರೊ.ಯು.ಜೆ.ಉಜ್ವಲ, ಡಾ.ಪ್ರಶಾಂತ ನಾಯಕ, ಡಾ.ವೈ.ಎಚ್.ರಾಜೇಶ ಇತರರಿದ್ದರು.
Published on
ಬೆಳಗಾವಿ : ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕ ಸದೃಢತೆ, ಉತ್ತಮ ಆರೋಗ್ಯಕ್ಕಾಗಿ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ನಿರ್ದೇಶನಾಲಯ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಸಾಧಕರ ದಿನದ ಉದ್ಘಾಟನಾ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಮಾತನಾಡಿದ ಅವರು, ಜೀವನದಲ್ಲಿ ಕಾಲೇಜು ದಿನಗಳು ಅತ್ಯಮೂಲ್ಯ. ಈ ಸಮಯವನ್ನು ವ್ಯರ್ಥ ಮಾಡಿಕೊಳ್ಳಬಾರದು. ಓದಿನ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಖಿಲ ಭಾರತೀಯ ಅಂತರ ವಿಶ್ವವಿದ್ಯಾಲಯ ಪಂದ್ಯಾವಳಿಯಲ್ಲಿ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್, ಈಜು, ಕರಾಟೆ, ಕಿಕ್ ಬಾಕ್ಸಿಂಗ್, ಅಕ್ವಾಟಿಕ್ಸ್ ಮತ್ತು ನೆಟ್‌ಬಾಲ್ ಸೇರಿದಂತೆ ಹಲವಾರು ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಅಭಿನಂದಿಸಲಾಯಿತು.
2023-24ನೇ ಸಾಲಿನಲ್ಲಿ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ 10 ಕಾಲೇಜುಗಳಿಗೆ 10 ಲಕ್ಷ ರೂ. ಹಾಗೂ ವಿದ್ಯಾರ್ಥಿಗಳಿಗೆ 8.5 ಲಕ್ಷ ರೂ., 2024-25ನೇ ಸಾಲಿನ 10 ಕಾಲೇಜುಗಳಿಗೆ 12.5 ಲಕ್ಷ ರೂ. ಮತ್ತು ವಿದ್ಯಾರ್ಥಿಗಳಿಗೆ ಅಂದಾಜು 7 ಲಕ್ಷ ರೂ.ಗಳನ್ನು ಕ್ರೀಡಾ ಪ್ರೋತ್ಸಾಹ ಧನವಾಗಿ ವಿತರಿಸಲಾಯಿತು.
ಕುಲಸಚಿವರಾದ ಡಾ.ಪ್ರಸಾದ ಬಿ.ರಾಂಪುರೆ, ಪ್ರೊ.ಯು.ಜೆ.ಉಜ್ವಲ, ವಿತ್ತಾಧಿಕಾರಿ ಡಾ.ಪ್ರಶಾಂತ ನಾಯಕ, ದೈಹಿಕ ಶಿಕ್ಷಣ ನಿರ್ದೇಶಕ ಡಾ.ವೈ.ಎಚ್.ರಾಜೇಶ ಇತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net