ಮತ್ತಿಕೊಪ್ಪದ ಕೆಎಲ್‌ಇ ಕಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಭತ್ತ ಹಾಗೂ ಕಬ್ಬು ಬೆಳೆ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಡಾ.ಮಂಜುನಾಥ ಚೌರಡ್ಡಿ ಬೆಳೆಯ ನಿರ್ವಹಣೆ ಕುರಿತು ವಿವರಿಸಿದರು. ಡಾ.ಎಸ್.ಎಸ್. ಹಿರೇಮಠ, ಜಿ.ಬಿ.ವಿಶ್ವನಾಥ, ಶಂಕರಗೌಡ ಪಾಟೀಲ, ಡಾ.ಗುರುರಾಜ ಕೌಜಲಗಿ ಇತರರಿದ್ದರು.
ಸಮರ್ಪಕ ನಿರ್ವಹಣೆ ಕೊರತೆ ಹಾಗೂ ರೋಗಬಾಧೆಯಿಂದ ಪ್ರಮುಖ ಆಹಾರ ಬೆಳೆ ಭತ್ತದ ಇಳುವರಿ ಕ್ಷೀಣಿಸುತ್ತಿದೆ. ಸಮಯಕ್ಕೆ ಸರಿಯಾಗಿ ರೋಗ ಗುರುತಿಸುವುದು ಬಹುಮುಖ್ಯವಾಗಿದೆ ಎಂದು ಐಸಿಎಆರ್-ಕೆಎಲ್‌ಇ ಕಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ತಿಳಿಸಿದರು.
ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಮಂಗಳವಾರ ಕಷಿ ಇಲಾಖೆ ಹಾಗೂ ಕಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಆತ್ಮ) ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಭತ್ತ ಹಾಗೂ ಕಬ್ಬು ಬೆಳೆ ನಿರ್ವಹಣೆ ಕುರಿತ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನಿ ಜಿ.ಬಿ.ವಿಶ್ವನಾಥ ಮಾತನಾಡಿ, ಮಣ್ಣು ಪರೀಕ್ಷೆ ಮಹತ್ವ, ಮಣ್ಣು ಮಾದರಿ ತೆಗೆಯುವ ಪದ್ಧತಿ, ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರಗಳ ಬಳಕೆ, ಭತ್ತದಲ್ಲಿ ಸಮಗ್ರ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.
ಕೇಂದ್ರದ ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ.ಎಸ್.ಎಸ್.ಹಿರೇಮಠ ಮಾತನಾಡಿದರು. ಕ್ಷೇತ್ರ ಅಧೀಕ್ಷಕ ಶಂಕರಗೌಡ ಪಾಟೀಲ, ಡಾ.ಗುರುರಾಜ ಕೌಜಲಗಿ, ಡಾ.ಭಾವಿನಿ ಪಾಟೀಲ ಇತರರಿದ್ದರು.