ವೆನೆಜುವೆಲಾ ರಾಷ್ಟ್ರ ಬೆಂಬಲಿಸುವಂತೆ ಒತ್ತಾಯಿಸಿ ಸಂಯುಕ್ತ ಹೋರಾಟ ಸಮಿತಿ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಿದಗೌಡ ಮೋದಗಿ, ಶೇಖರ ಲಕ್ಕನ್ನವರ, ರಮೇಶ ರಾಮಗೊಂಡನ್ನವರ, ಸೋಮಪ್ಪ ದುರ್ಗಿ ಇತರರಿದ್ದರು.
ಬೆಳಗಾವಿ: ವೆನೆಜುವೆಲಾ ರಾಷ್ಟ್ರದ ಮೇಲಿನ ಅಮೆರಿಕದ ಆಕ್ರಮಣಕಾರಿ ನೀತಿ ಖಂಡಿಸಿ, ಕೇಂದ್ರ ಸರ್ಕಾರ ವೆನೆಜುವೆಲಾ ಬೆಂಬಲಿಸಬೇಕು ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ
ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅಮೆರಿಕದ ಮಿಲಿಟರಿ ಪಡೆಗಳು ವೆನೆಜುವೆಲಾ ರಾಜಧಾನಿ ಮತ್ತು ಅಲ್ಲಿನ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆೆ. ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಪಹರಣ ಮಾಡಿರುವ ಕೃತ್ಯ ಖಂಡನಾರ್ಹ. ವೆನೆಜುವೆಲಾದಲ್ಲಿರುವ ನೈಸರ್ಗಿಕ ಸಂಪತ್ತು, ತೈಲಾಗಾರ ಹಾಗೂ ಮಾರುಕಟ್ಟೆ ಸ್ವಾಧೀನಪಡಿಸಿಕೊಳ್ಳಲು ಅಮೆರಿಕ ವೆನೆಜುವೆಲಾದ ಸಾರ್ವಭೌಮತ್ವ ಹರಣ ಮಾಡಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಮೆರಿಕದ ದಮನಕಾರಿ ನೀತಿ ಖಂಡಿಸಬೇಕು.