ಇ-ಫಾರ್ಮಾಸಿ ಕಾರ್ಯಾಚರಣೆ ತಡೆಗೆ ಆಗ್ರಹ

ಫಾರ್ಮಾಸಿಗಳ ಕಾನೂನುಬಾಹಿರ ಕಾರ್ಯಾಚರಣೆ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಫಾರ್ಮಾಸಿ ಒಕ್ಕೂಟದ ವತಿಯಿಂದ ಯರಗಟ್ಟಿಯಲ್ಲಿ ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳಗೆ ಮನವಿ ಸಲ್ಲಿಸಲಾಯಿತು. ವೀರಭದ್ರಪ್ಪ ಮಲ್ನಾಕರ, ರವಿ ಮದ್ದಾನಿ ಇತರರಿದ್ದರು.

Published on
ಯರಗಟ್ಟಿ: ಇ-ಫಾರ್ಮಾಸಿಗಳ ಕಾನೂನುಬಾಹಿರ ಕಾರ್ಯಾಚರಣೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಫಾರ್ಮಾಸಿ ಒಕ್ಕೂಟದ ವತಿಯಿಂದ ಪಟ್ಟಣದಲ್ಲಿ ತಹಸೀಲ್ದಾರ್ ಎಂ.ವಿ.ಗುಂಡಪ್ಪಗೋಳಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಆಕರ್ಷಕ ರಿಯಾಯಿತಿ ನೀಡುವ ಆನ್‌ಲೈನ್ ಏಜೆನ್ಸಿಗಳ ಮೂಲಕ ಔಷಧ ಪೂರೈಸಲಾಗುತ್ತಿದೆ. ಇದು ಔಷಧಗಳ ಕಾನೂನುಬದ್ಧತೆ ಮತ್ತು ನೈಜತೆ ಬಗ್ಗೆ ಕಳವಳ ಹುಟ್ಟುಹಾಕುತ್ತದೆ. ಅಸೋಸಿಯೇಷನ್ ಸದಸ್ಯ ಔಷಧ ವ್ಯಾಪಾರಸ್ಥರು ಶಾಸನಬದ್ಧ ನಿಯಮ ಪಾಲನೆಯೊಂದಿಗೆ ವೈದ್ಯರ ಸಲಹೆ ಮೇರೆಗೆ ಸಮರ್ಪಕ ಔಷಧ ವಿತರಿಸುತ್ತಾರೆ. ಆದರೆ, ಆನ್‌ಲೈನ್ ಮಾರಾಟದಲ್ಲಿ ನಿಯಮ ಪಾಲಿಸದೆ ಮಾರಾಟ ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಔಷಧ ವ್ಯಾಪಾರಸ್ಥರು ಅಸಮಾಧಾನ ವ್ಯಕ್ತಪಡಿಸಿದರು.
ಆನ್‌ಲೈನ್ ಔಷಧದಿಂದ ಯುವಕರು ಮತ್ತು ವ್ಯಸನಿಗಳಿಗೆ ನಿಷೇಧಿತ ನಿದ್ರಾಜನಕ ಮತ್ತಿತರ ಅಪಾಯಕಾರಿ ಔಷಧಗಳು ಸುಲಭವಾಗಿ ಸಿಗುವಂತಾಗಿದೆ. ಇ-ಫಾರ್ಮಾಸಿ ಕಾನೂನುಬಾಹಿರ ಕಾರ್ಯಾಚರಣೆ ನಿಲ್ಲಿಸುವವ ಜತೆಗೆ ಅಧಿಸೂಚನೆ ಹಿಂಪಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ವೀರಭದ್ರಪ್ಪ ಮಲ್ನಾಕರ, ರವಿ ಮದ್ದಾನಿ, ಹೇಮಂತ ಮಳಗಲಿ, ಸಾಗರ ಹೊಸಕೋಟೆ, ಅಭಿಷೇಕ ಕೊಪ್ಪದ, ಶಶಿಕಾಂತ ತೊಡಕರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net