ಜಮೀನುಗಳಿಗೆ ರಸ್ತೆ ನಿರ್ಮಿಸಲು ಆಗ್ರಹ

ಜಮೀನುಗಳಿಗೆ ಸಮರ್ಪಕ ರಸ್ತೆ ನಿರ್ಮಿಸಲು ಆಗ್ರಹಿಸಿ ಬಾವಿಹಾಳ ಗ್ರಾಮದ ರೈತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸುಭಾಸ ಇಂಚಲ, ಮುದುಕಪ್ಪ ಕಮತ, ಬಸವರಾಜ ವೆಂಕಟಾಪುರ ಇತರರಿದ್ದರು.
ಜಮೀನುಗಳಿಗೆ ಸಮರ್ಪಕ ರಸ್ತೆ ನಿರ್ಮಿಸಲು ಆಗ್ರಹಿಸಿ ಬಾವಿಹಾಳ ಗ್ರಾಮದ ರೈತರು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸುಭಾಸ ಇಂಚಲ, ಮುದುಕಪ್ಪ ಕಮತ, ಬಸವರಾಜ ವೆಂಕಟಾಪುರ ಇತರರಿದ್ದರು.
Published on
ಬೈಲಹೊಂಗಲ: ತಾಲೂಕಿನ ನೇಸರಗಿ ಹೋಬಳಿ ವ್ಯಾಪ್ತಿಯ ಬಾವಿಹಾಳ ಗ್ರಾಮದ ಹದ್ದಿನ 200 ಎಕರೆ ಜಮೀನಿನಲ್ಲಿ ರೈತರು ಕಬ್ಬು ಬೆಳೆ ಬೆಳೆಯುತ್ತಾರೆ. ಹೊಲಕ್ಕೆ ತೆರಳಲು ಸಮರ್ಪಕ ರಸ್ತೆ ನಿರ್ಮಿಸಬೇಕೆಂದು ಆಗ್ರಹಿಸಿ ನಗರದಲ್ಲಿ ತಹಸೀಲ್ದಾರ್‌ಗೆ ಈಚೆಗೆ ಮನವಿ ಸಲ್ಲಿಸಿದರು.
ಬೆಳೆ ಸಾಗಿಸಲು ಟ್ರ್ಯಾಕ್ಟರ್, ಲಾರಿ ಸೇರಿದಂತೆ ಇನ್ನಿತರ ಬೃಹತ್ ವಾಹನಗಳು ಜಮೀನುಗಳಿಗೆ ತೆರಳಲು ರಸ್ತೆ ಇಲ್ಲದೆ ಪರದಾಡುವಂತಾಗಿದೆ. ಹೀಗಾಗಿ, ವ್ಯವಸ್ಥಿತ ರಸ್ತೆ ನಿರ್ಮಿಸಿ, ಸೇತುವೆ ಎತ್ತರ ಹೆಚ್ಚಿಸಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಸುಭಾಸ ಇಂಚಲ, ಮುದುಕಪ್ಪ ಕಮತ, ಬಸವರಾಜ ವೆಂಕಟಾಪುರ, ರುದ್ರಪ್ಪ ಇಂಚಲ, ಉಳವಪ್ಪ ಬಾವಿಹಾಳ, ಪ್ರಕಾಶ ಇಂಚಲ, ಸೋಮಪ್ಪ ಕಮತ, ಬಸವರಾಜ ರಾಗಿ, ಗಂಗಪ್ಪ ಇಂಚಲ, ಈರಪ್ಪ ಇಂಚಲ, ಕರ್ನಾಟಕ ನವ ನಿರ್ಮಾಣ ಪಡೆಯ ಸಂಪಗಾವ ಘಟಕದ ಅಧ್ಯಕ್ಷ ಮಂಜುನಾಥ ಉಳವಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net