ಸರ್ವೀಸ್ ರಸ್ತೆ ನಿರ್ಮಿಸಲು ಒತ್ತಾಯ

ಮರಕುಂಬಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಅಂಡರ್‌ಪಾಸ್ ಹಾಗೂ ಸರ್ವೀಸ್ ರಸ್ತೆ ನಿರ್ಮಿಸಲು ವಿಜಯ ಮೆಟಗುಡ್ಡ ಸಂಸದ ಜಗದೀಶ ಶೆಟ್ಟರಗೆ ಮನವಿ ಸಲ್ಲಿಸಿದರು. ಮಹಾಂತೇಶ ಕೋರಿಮಠ, ಬಸವರಾಜ ಮುರಕಿಬಾವಿ ಇತರರಿದ್ದರು.
ಮರಕುಂಬಿ ಗ್ರಾಮದ ರಾಷ್ಟ್ರೀಯ ಹೆದ್ದಾರಿಗೆ ಅಂಡರ್‌ಪಾಸ್ ಹಾಗೂ ಸರ್ವೀಸ್ ರಸ್ತೆ ನಿರ್ಮಿಸಲು ವಿಜಯ ಮೆಟಗುಡ್ಡ ಸಂಸದ ಜಗದೀಶ ಶೆಟ್ಟರಗೆ ಮನವಿ ಸಲ್ಲಿಸಿದರು. ಮಹಾಂತೇಶ ಕೋರಿಮಠ, ಬಸವರಾಜ ಮುರಕಿಬಾವಿ ಇತರರಿದ್ದರು.
Published on
ಬೈಲಹೊಂಗಲ: ತಾಲೂಕಿನ ಮರಕುಂಬಿ ಗ್ರಾಮದ ಸಮೀಪದ ಗ್ರೀನ್ ಕಾರಿಡಾರ್ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಜಮೀನಿಗೆ ತೆರಳಲು ಅಂಡರ್ ಪಾಸ್ ಹಾಗೂ ಸರ್ವೀಸ್ ರಸ್ತೆ ನಿರ್ಮಿಸಲು ಒತ್ತಾಯಿಸಿ ಬಿಜೆಪಿ ಮುಖಂಡ ವಿಜಯ ಮೆಟಗುಡ್ಡ ಸಂಸದ ಜಗದೀಶ ಶೆಟ್ಟರಗೆ ಬೆಳಗಾವಿಯಲ್ಲಿ ಮನವಿ ಸಲ್ಲಿಸಿದರು.
ವಿಜಯ ಮೆಟಗುಡ್ಡ ಮಾತನಾಡಿ, ಹೆದ್ದಾರಿ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ. ರೈತರು ಜಮೀನಿಗೆ ತೆರಳಲು ಬಹುದೂರ ತೆರಳಬೇಕಾದ ಸ್ಥಿತಿ ಬಂದೊದಗಿದೆ. ಕೂಡಲೇ ಕಾಮಗಾರಿಯಲ್ಲಿ ಮರಕುಂಬಿ ಗ್ರಾಮದ ಸಮೀಪ ಅಂಡರ್‌ಪಾಸ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕೆಂದು ವಿನಂತಿಸಿದರು. ಸಂಸದ ಜಗದೀಶ ಶೆಟ್ಟರ ಮಾತನಾಡಿ, ಈ ಕುರಿತು ಹೆದ್ದಾರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಜರುಗಿಸುವ ಭರವಸೆ ನೀಡಿದರು.
ಗ್ರಾಮಸ್ಥರಾದ ಮಹಾಂತೇಶ ಕೋರಿಮಠ, ಬಸವರಾಜ ಮುರಕಿಬಾವಿ, ಸೋಮಪ್ಪ ಬೈಲವಾಡ, ಅಡಿವೆಪ್ಪ ಬೈಲವಾಡ, ಶಂಕರ ತೋಟಗಿ, ಮುದುಕಪ್ಪ ಬೋಗೂರ, ಮಲ್ಲಿಕಾರ್ಜುನ ಬೈಲವಾಡ, ನಾಗಪ್ಪ ಮೇಟಿ, ಸೋಮಪ್ಪ ತಾರಾವಿ, ರೇವಪ್ಪ ಬೈಲವಾಡ, ಬಸಯ್ಯ ಮಠಪತಿ, ಸುರೇಶ ಮಠಪತಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net