ಬೆಳಗಾವಿಯಿಂದ ವಿಮಾನ ಸೇವೆ ಸ್ಥಗಿತಗೊಳಿಸದಂತೆ ಆಗ್ರಹಿಸಿ ನಿರ್ದೇಶಕ ಎಸ್.ತ್ಯಾಗರಾಜನ್ಗೆ ಕ್ಲಾತ್ ಮರ್ಚೆಂಟ್ಸ್ ಅಸೋಸಿಯೇಷನ್ನಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಸತೀಶ ತೆಂಡೂಲ್ಕರ್, ಮುಖೇಶ ಖೋಡಾ, ಮುಖೇಶ ಸಂವಿ, ನಿತೇಶ ಜೈನ, ರಾಜು ಪಾಲಿವಾಲಾ, ಲಾಲ್ಚಂದ ಇದ್ದರು.
ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಿಂದ ಸದ್ಯ ಚಾಲ್ತಿಯಲ್ಲಿರುವ ವಿವಿಧ ನಗರಗಳೊಂದಿಗಿನ ವಿಮಾನಯಾನ ಸಂಪರ್ಕವನ್ನು ರದ್ದುಗೊಳಿಸಬಾರದು ಎಂದು ಬೆಳಗಾವಿ ಕ್ಲಾತ್ ಮರ್ಚೆಂಟ್ಸ್ ಅಸೋಸಿಯೇಷನ್ ಮತ್ತು ಟ್ರೇಡರ್ಸ್ ಫೋರಂ ಆಗ್ರಹಿಸಿದೆ.
ಜ.15ರಿಂದ ಕೆಲ ವಿಮಾನ ಸೇವೆ ಸ್ಥಗಿತಗೊಳಿಸಲಾಗುತ್ತಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಶುಕ್ರವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ನಿರ್ದೇಶಕ ಎಸ್.ತ್ಯಾಗರಾಜನ್ಗೆ ಮನವಿ ಸಲ್ಲಿಸಿದರು.
ಚಾಲ್ತಿಯಿರುವ ಯಾವುದೇ ವಿಮಾನ ಸೇವೆ ಸ್ಥಗಿತಗೊಳಿಸಿದಲ್ಲಿ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಪೆಟ್ಟು ಬೀಳುತ್ತದೆ. ಯಾವುದೇ ಕಾರಣಕ್ಕೂ ಸಂಪರ್ಕ ನಿಲ್ಲಬಾರದು. 2019ರ ಉಡಾನ್ ಯೋಜನೆಯ 13 ಸೆಕ್ಟೆರ್ಗಳ ವಿಮಾನ ಸೇವೆ ಪುನರಾರಂಭಿಸಬೇಕು ಎಂದು ಆಗ್ರಹಿಸಿದರು.
ಹೊಸ ರ್ಟಮಿನಲ್ ಕಾರ್ಯದ ಬಗ್ಗೆ ಸೀನಿಯರ್ ಸೂಪರಿಂಟೆಂಡೆಂಟ್ ಸುಭಾಷ ಪಾಟೀಲ ಮಾಹಿತಿ ನೀಡಿದರು.
ಸಂದ ಅಧ್ಯಕ್ಷ ಸತೀಶ ತೆಂಡೂಲ್ಕರ್, ಕಾರ್ಯದರ್ಶಿ ಮುಖೇಶ ಖೋಡಾ, ಮುಖೇಶ ಸಂವಿ, ನಿತೇಶ ಜೈನ, ರಾಜು ಪಾಲಿವಾಲಾ, ಲಾಲ್ಚಂದ ಛಾಪ್ರು ಇತರರಿದ್ದರು.