ಎಂಇಎಸ್ ಪ್ರತಿಭಟನೆಗೆ ಅನುಮತಿ ನೀಡದಿರಲು ಆಗ್ರಹ

ಎಂಇಎಸ್ ಪ್ರತಿಭಟನೆಗೆ ಅನುಮತಿ ನೀಡದಂತೆ ವಿವಿಧ ಕನ್ನಡಪರ ಸಂಘಟನೆಗಳಿಂದ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆಗೆ ಮನವಿ ಸಲ್ಲಿಸಲಾಯಿತಿ. ಬಲರಾಮ ಮಾಸೇನಟ್ಟಿ, ಬಾಳಪ್ಪ ಗುಡಗೇನಟ್ಟಿ, ವಾಜೀದ ಹಿರೇಕೊಡಿ, ಮಲ್ಲಪ್ಪ ಗುಡಗೇನಟ್ಟಿ, ಮಹಾದೇವ ತಳವಾರ ಇತರರಿದ್ದರು.
ಎಂಇಎಸ್ ಪ್ರತಿಭಟನೆಗೆ ಅನುಮತಿ ನೀಡದಂತೆ ವಿವಿಧ ಕನ್ನಡಪರ ಸಂಘಟನೆಗಳಿಂದ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆಗೆ ಮನವಿ ಸಲ್ಲಿಸಲಾಯಿತಿ. ಬಲರಾಮ ಮಾಸೇನಟ್ಟಿ, ಬಾಳಪ್ಪ ಗುಡಗೇನಟ್ಟಿ, ವಾಜೀದ ಹಿರೇಕೊಡಿ, ಮಲ್ಲಪ್ಪ ಗುಡಗೇನಟ್ಟಿ, ಮಹಾದೇವ ತಳವಾರ ಇತರರಿದ್ದರು.
Published on
ಬೆಳಗಾವಿ : ಕನ್ನಡ ಹಾಗೂ ಕರ್ನಾಟಕದ ವಿರುದ್ಧ ಜೂ.22ರಂದು ಎಂಇಎಸ್ ಹಮ್ಮಿಕೊಳ್ಳಲು ಮುಂದಾಗಿರುವ ಪ್ರತಿಭಟನೆಗೆ ಯಾವುದೇ ಅನುಮತಿ ನೀಡಬಾರದು ಎಂದು ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳಿಂದ ಶುಕ್ರವಾರ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆಗೆ ಮನವಿ ಸಲ್ಲಿಸಲಾಯಿತು.
ಗಡಿನಾಡು ಕನ್ನಡಿಗರ ಸೇನೆ, ಕರ್ನಾಟಕ ಯವ ರಕ್ಷಣಾ ವೇದಿಕೆ ಯುವ ಸೇನೆ, ಕರವೇ ಶಿವರಾಮೇಗೌಡ ಬಣ ಮತ್ತು ಸ್ವಾಭಿಮಾನಿ ಬಣ, ಕರುನಾಡು ರಕ್ಷಣಾ ವೇದಿಕೆ, ಕಿತ್ತೂರು ಕರ್ನಾಟಕ ಸೇನೆ ಸೇರಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಕರ್ನಾಟಕದ ವಿರುದ್ಧ ಪ್ರತಿಭಟನೆ ಮಾಡಲು ಮುಂದಾಗಿರುವವರನ್ನು ಮಾತುಕತೆಗೆ ಕರೆಯುವ ಅಥವಾ ಅವರೊಂದಿಗೆ ಚರ್ಚಿಸುವುದಾಗಿ ಯಾವ ಕೆಲಸವನ್ನೂ ಅಧಿಕಾರಿಗಳು ಮಾಡಬಾರದು. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಕರ್ನಾಟಕದ ಗಡಿ ಭಾಗದಲ್ಲಿ ಭಾಷಾ ಅಲ್ಪಸಂಖ್ಯಾತರಿಗೆ ಸರ್ಕಾರ ಹಲವಾರು ಸೌಕರ್ಯ ನೀಡಿದೆ. ಆದರೆ ಮಹಾರಾಷ್ಟ್ರದ ಅಚ್ಚ ಕನ್ನಡ ಪ್ರದೇಶಗಳಾದ ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಹಲವಾರು ಕಡೆ ಕನ್ನಡ ಶಾಲೆಗಳನ್ನು ಮುಚ್ಚುವ ಕೆಲಸ ಅಲ್ಲಿನ ಸರ್ಕಾರ ಮಾಡುತ್ತಿದೆ. ಅಲ್ಲಿ ಕನ್ನಡದಲ್ಲಿ ಒಂದು ನಾಮಫಲಕವೂ ಸಿಗುವುದಿಲ್ಲ. ಆದರೆ, ನಮ್ಮ ಗಡಿಭಾಗದಲ್ಲಿ ಎಲ್ಲವನ್ನು ಸರಿಯಾಗಿ ಕೊಟ್ಟಾಗಲೂ ಎಂಇಎಸ್, ಮರಾಠಿಗರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಅದರ ಒಂದು ಭಾಗವಾಗಿ ಈಗ ಪ್ರತಿಭಟನೆ ಮಾಡುತ್ತಿದ್ದು, ಇದಕ್ಕೆ ಯಾವುದೇ ಕಾರಣಕ್ಕೂ ಅನುಮತಿ ಕೊಡಬಾರದು ಎಂದು ಕೋರಿದರು.
ಬಲರಾಮ ಮಾಸೇನಟ್ಟಿ, ಬಾಳಪ್ಪ ಗುಡಗೇನಟ್ಟಿ, ವಾಜೀದ ಹಿರೇಕೊಡಿ, ಮಲ್ಲಪ್ಪ ಗುಡಗೇನಟ್ಟಿ, ಈಶ್ವರಗೌಡ ಪಾಟೀಲ, ಮಹಾದೇವ ತಳವಾರ, ಎಸ್.ಎಸ್.ಮೂಕನವರ, ಶರೀಫ್ ಸನದಿ, ನಾಗೇಶ ಕೊಪ್ಪದ, ಪರೀಧಾ ನದಾಫ್, ಸಲೀಂ ಕಾಲೆಕಾನ, ರಾಹುಲ ಭೋಸಲೆ, ಲಕ್ಷ್ಮಣ ಲಮಾಣಿ, ಆನಂದ ಬಿಲಾವರ, ಸಂತೊಷ ತಳ್ಳಿಮನಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net