ಹೌದು. ಬೆಳಗಾವಿ ಮಹಾನಗರ ಪಾಲಿಕೆ, ಗೋಕಾಕ, ನಿಪ್ಪಾಣಿ, ಬೈಲಹೊಂಗಲ, ಸವದತ್ತಿ ನಗರಸಭೆ ಸೇರಿ ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯಲ್ಲಿರುವ ಬಡವರು ದಶಕದಿಂದ ಸೂರಿಗಾಗಿ ಅಲೆದಾಡುತ್ತಿದ್ದಾರೆ. ಆದರೆ, ನಿವೇಶನ ಅಲಭ್ಯತೆ, ದಾಖಲೆ, ತಾಂತ್ರಿಕ ಸಮಸ್ಯೆದಿಂದಾಗಿ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದೆ ಬಾಡಿಗೆ ಮನೆ ಇಲ್ಲವೇ ಚಿಕ್ಕ ಗೂಡಿಸಿನಲ್ಲಿಯೇ ಬದುಕು ಕಳೆಯುತ್ತಿದ್ದಾರೆ. ಈ ವಸತಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಜಿ+3 ಮಾದರಿ ಮನೆ ಮಾಡುತ್ತಿದೆ. ಆದರೆ, ಸರ್ಕಾರದ ವಿಳಂಬ ನೀತಿಯಿಂದಾಗಿ ಯೋಜನೆ ನಿಗದಿ ಸಮಯದಲ್ಲಿ ಪೂರ್ಣಗೊಳ್ಳುತ್ತಿಲ್ಲ.