ಬಹುಭಾಷಾ ನಟ ಪ್ರಕಾಶ ರೈ ಬಂಧನಕ್ಕೆ ಆಗ್ರಹ

ಪ್ರಮೋದ‌ ಮುತಾಲಿಕ
ಪ್ರಮೋದ‌ ಮುತಾಲಿಕ
Published on
ಬೆಳಗಾವಿ: ಹಿಂದುಗಳ ಪವಿತ್ರಸ್ಥಾನ, ಧಾರ್ಮಿಕ ಕ್ಷೇತ್ರ ಧರ್ಮಸ್ಥಳ ವಿರುದ್ದ‌ ಷಡ್ಯಂತರ ರೂಪಿಸಿದ್ದ ನಟ‌ ಪ್ರಕಾಶ ರೈ ಬಂಧನಕ್ಕೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ಧರ್ಮಸ್ಥಳದ ಬುರಡೆ ಪ್ರಕರಣದಲ್ಲಿ ಬಂಧಿತರಾಗಿರುವ ಚಿನ್ನಯ್ಯ ಅವರೇ ಪ್ರಕರಣದ ಹಿಂದೆ ಬಹುಭಾಷಾ ನಟ ಪ್ರಕಾಶ್ ರಾಜ್ (ರೈ) ಅವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಎಸ್ ಐಟಿತನಿಖಾ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರಕಾಶ ರೈ ಸಿನೆಮಾ ಬಹಿಷ್ಕರಿಸಬೇಕು ಎಂದು ಆಗ್ರಹಿಸಿ ಕನ್ನಡ, ತೆಲಗು, ತಮಿಳು ಚಲನಚಿತ್ರ ‌ಮಂಡಳಿಗಳಿಗೆ ದೂರು ಸಲ್ಲಿಸುತ್ತೇವೆ.‌ಅವರ ವಿರುದ್ಧ ನಿರಂತರ ಹೋರಾಟ ಆರಂಭಿಸುತ್ತೇವೆ ಎಂದರು.
ಧರ್ಮಸ್ಥಳದಂತಹ ಪವಿತ್ರ ಧಾರ್ಮಿಕ ಕ್ಷೇತ್ರದ ಹೆಸರನ್ನು ಹಾಳುಮಾಡುವ ಏಕೈಕ ಉದ್ದೇಶದಿಂದ ಸುಜಾತಾ ಭಟ್ ಎಂಬುವವರನ್ನು ದಾಳವಾಗಿ ಬಳಸಿಕೊಳ್ಳಲಾಗಿತ್ತು. ಕಾಲೇಜಿನಲ್ಲಿ ಓದುತ್ತಿದ್ದ ಅವರ ಮಗಳು ಅನನ್ಯ ಭಟ್ ಎಂಬಾಕೆಯನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಸುಳ್ಳು ಸಾಕ್ಷಿ ಹೇಳಿಸಲು ಹಣದ ಆಮಿಷ ಒಡ್ಡಲಾಗಿತ್ತು. ಈ ಕುರಿತಾದ ಸಂಚು ರೂಪಿಸಲು ಪ್ರಕಾಶ್ ರಾಜ್ ಅವರಿಗೆ ಕೇರಳ ಮೂಲದಿಂದ 200 ಕೋಟಿ ರೂ. ಹಣ ಹರಿದುಬಂದಿದೆ ಎಂದು ಬುರುಡೆ ಚೆನ್ನಯ್ಯ ತಿಳಿಸಿದ್ದಾರೆ" ಎಂದು ಪ್ರಮೋದ್ ಮುತಾಲಿಕ್ ಆರೋಪಿಸಿದರು.
ಬಾಕ್ಸ್
.ಭಗವಾನ್ ವಿರುದ್ಧ ಕಾನೂನು ಹೋರಾಟ
ಹರಿಹರದಲ್ಲಿ ಪ್ರೊ. ಭಗವಾನ್ ಶ್ರೀರಾಮನ ವಿರುದ್ಧ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯ. ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಮತ್ತು ಮರ್ಯಾದಾ ಪುರುಷೋತ್ತಮ ಶ್ರೀರಾಮನ ಚಾರಿತ್ರ್ಯದ ಬಗ್ಗೆ ಭಗವಾನ್ ಅವರು ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ.
ಸನಾತನ ಧರ್ಮದ ಭಾವನೆಗಳಿಗೆ ಧಕ್ಕೆ ತಂದಿರುವ ಭಗವಾನ್ ವಿರುದ್ಧ ಸರ್ಕಾರ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲದಿರುವುದು ದುರದೃಷ್ಟಕರ.
ಧಾರವಾಡ ಪೀಠದಲ್ಲಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಿದೆ ಎಂದು ಮುತಾಲಿಕ್ ಎಚ್ಚರಿಕೆ ನೀಡಿದರು.
ಶುಕ್ರವಾರ ನಗರದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ
> "
> ********************
*ಚಲನಚಿತ್ರ ಮಂಡಳಿಗೆ ಮನವಿ: ನಟನ ಬಹಿಷ್ಕಾರಕ್ಕೆ ಒತ್ತಾಯ*
ಸನಾತನ ಧರ್ಮ ಹಾಗೂ ಧಾರ್ಮಿಕ ಕ್ಷೇತ್ರಗಳ ವಿರುದ್ಧ ನಿರಂತರವಾಗಿ ಷಡ್ಯಂತ್ರ ರೂಪಿಸುತ್ತಿರುವ ನಟ ಪ್ರಕಾಶ್ ರಾಜ್ ಅವರನ್ನು ಚಿತ್ರರಂಗದಿಂದಲೇ ದೂರ ಇಡಬೇಕು ಎಂದು ಮುತಾಲಿಕ್ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಸಂಪೂರ್ಣವಾಗಿ ಬಹಿಷ್ಕರಿಸುವಂತೆ ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ಶೀಘ್ರದಲ್ಲೇ ಶ್ರೀರಾಮ ಸೇನೆಯ ವತಿಯಿಂದ ಅಧಿಕೃತ ಮನವಿ ಸಲ್ಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಇದರೊಂದಿಗೆ, ಸುದೀರ್ಘ ಕಾಲದಿಂದ ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿರುವ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಯು ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದೂ ಅವರು ಒತ್ತಾಯಿಸಿದರು.
*ಪ್ರೊ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net