ರಸ್ತೆ ಸುಧಾರಣೆ ಮಾಡಲು ಒತ್ತಾಯ

ಪಾಂಡೆಗಾಂವ-ಕಂಗ್ನೋಳಿ ರಸ್ತೆ ಸುಧಾರಣೆಗೆ ಆಗ್ರಹಿಸಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಪಾಂಡೆಗಾಂವ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸಚಿನ ಪಾಟೀಲ, ರಾಜಾರಾಮ ಅಠಾವಳೆ ಇತರರಿದ್ದರು.
ಪಾಂಡೆಗಾಂವ-ಕಂಗ್ನೋಳಿ ರಸ್ತೆ ಸುಧಾರಣೆಗೆ ಆಗ್ರಹಿಸಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಪಾಂಡೆಗಾಂವ ಗ್ರಾಮಸ್ಥರು ಮನವಿ ಸಲ್ಲಿಸಿದರು. ಸಚಿನ ಪಾಟೀಲ, ರಾಜಾರಾಮ ಅಠಾವಳೆ ಇತರರಿದ್ದರು.
Published on
ಸಂಬರಗಿ: ಸಮೀಪದ ಪಾಂಡೆಗಾಂವ-ಕಂಗ್ನೋಳಿ ರಸ್ತೆ ಸುಧಾರಣೆಗೆ ಆಗ್ರಹಿಸಿ ಪಾಂಡೆಗಾಂವ ಗ್ರಾಮಸ್ಥರು ಗುರುವಾರ ಸಂಸದೆ ಪ್ರಿಯಾಂಕಾ ಜಾರಕಿಹೊಳಿಗೆ ಈಚೆಗೆ ಅಥಣಿಯಲ್ಲಿ ಮನವಿ ಸಲ್ಲಿಸಿದರು.
ಭಾರಿ ಗಾತ್ರದ ವಾಹನಗಳ ಓಡಾಟದಿಂದ ರಸ್ತೆ ಹದಗೆಟ್ಟಿದೆ. ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಗಳು ಬಿದ್ದು, ವಾಹನ ಓಡಾಟಕ್ಕೆ ತೊಂದರೆಯಾಗುತ್ತಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕೂಡಲೇ ರಸ್ತೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಸಮಸ್ಯೆ ಸರಿಪಡಿಸದಿದ್ದಲ್ಲಿ ಹೋರಾಟ ಮಾಡುವುದಾಗಿ ತಿಳಿಸಿದರು.
ಮಾಜಿ ಸೈನಿಕರಾದ ಸಚಿನ ಪಾಟೀಲ, ರಾಜಾರಾಮ ಅಠಾವಳೆ, ಮುಖಂಡರಾದ ಧನಾಜಿ ಜಾಧವ, ಸುಭಾಸ ಪಾಟೀಲ, ಸಂದೀಪ ಪಾಟೀಲ, ಅಜಿತ ಪಾಟೀಲ, ರಾಜು ಕಾಗೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net