ಏತ ನೀರಾವರಿ ಅನುಷ್ಠಾನಕ್ಕೆ ಒತ್ತಾಯ

ರಾಮದುರ್ಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರಕಾಶ ಹೊಳೆಪ್ಪಗೋಳ ಮಾತನಾಡಿದರು. ಚಿದಂಬರ ಮಡಿವಾಳರ, ಶ್ರೀನಿವಾಸ ಅರಿಸಿನಗೋಡಿ ಇತರರಿದ್ದರು.
ರಾಮದುರ್ಗದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪ್ರಕಾಶ ಹೊಳೆಪ್ಪಗೋಳ ಮಾತನಾಡಿದರು. ಚಿದಂಬರ ಮಡಿವಾಳರ, ಶ್ರೀನಿವಾಸ ಅರಿಸಿನಗೋಡಿ ಇತರರಿದ್ದರು.
Published on
ರಾಮದುರ್ಗ: ವೀರಭದ್ರೇಶ್ವರ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಶೀಘ್ರ ಮುಗಿಸಬೇಕು ಎಂದು ಆಗ್ರಹಿಸಿ ರೈತಪರ ಸಂಘಟನೆಗಳ ನೇತೃತ್ವದಲ್ಲಿ ಸಾಲಹಳ್ಳಿಯಲ್ಲಿ ಮೇ 25ರಂದು ನಡೆಸಲು ಉದ್ದೇಶಿಸಿರುವ ಧರಣಿ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ರೈತರೊಂದಿಗೆ ಬುಧವಾರ ಸಭೆ ನಡೆಸಿದರು.
ಯೋಜನೆ ಕಾಮಗಾರಿ ಆರಂಭವಾಗಿ ಸುಮಾರು 9 ವರ್ಷ ಗತಿಸಿವೆ. ಸರ್ಕಾರ ಕಾಮಗಾರಿ ಮುಗಿಸಲು ಕ್ರಮವಹಿಸಿಲ್ಲ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಮುಗಿಸುವ ಲಿಖಿತ ಭರವಸೆ ನೀಡುವವರೆಗೂ ಸಂಚಾರ ತಡೆದು ಧರಣಿ ನಡೆಸುವ ತಿರ್ಮಾನ ಕೈಬಿಡುವುದಿಲ್ಲ ಎಂದು ರೈತರು ತಿಳಿಸಿದರು.
ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ ಮಾತನಾಡಿ, ಜನರಿಗೆ ಯಾವುದೇ ತೊಂದರೆ ಆಗದಂತೆ ಶಾಂತಿಯುತ ಸತ್ಯಾಗ್ರಹ ನಡೆಸಬೇಕು. ನಿಮ್ಮ ಬೇಡಿಕೆ ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು. ಡಿವೈಎಸ್ಪಿ ಚಿದಂಬರ ಮಡಿವಾಳರ ಮಾತನಾಡಿದರು. ಮಲಪ್ರಭಾ ಎಡದಂಡೆ ಕಾಲುವೆ ರಾಮದುರ್ಗ ವಿಭಾಗದ ಎಇಇ ಶ್ರೀನಿವಾಸ ಅರಿಸಿನಗೋಡಿ, ಸಿಪಿಐ ವಿನಾಯಕ ಬಡಿಗೇರ, ಪಿಎಸ್‌ಐ ಬಸವರಾಜ ಕೊಣ್ಣೂರೆ, ಮಾರುತಿ ಕೊಪ್ಪದ, ಈರನಗೌಡ ಪಾಟೀಲ, ಬಿ.ಎಸ್.ನಾಯಕ, ಶಂಕರಗೌಡ ಹೊಸಗೌಡ್ರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net