ಕೆಪಿಎಸ್‌ಸಿ ಹಗರಣಗಳ ಉನ್ನತ ಮಟ್ಟದ ತನಿಖೆಗೆ ಆಗ್ರಹ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬುಧವಾರ ಎಬಿವಿಪಿಯಿಂದ ಪ್ರತಿಭಟನೆ ನಡೆಯಿತು. ಪ್ರಥಮ ಪಾಟೀಲ, ಆದರ್ಶ ಉದೋಶಿ, ಮಹಾಂತೇಶ ಹಂಪಿಹೊಳಿ,ತ್ರಿವೇಣಿ ಕರಿಗಾರ, ಸ್ವಾತಿ ದೇಶನೂರ, ಪೂಜಾ ಹೊಳಿ ಇತರರಿದ್ದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬುಧವಾರ ಎಬಿವಿಪಿಯಿಂದ ಪ್ರತಿಭಟನೆ ನಡೆಯಿತು. ಪ್ರಥಮ ಪಾಟೀಲ, ಆದರ್ಶ ಉದೋಶಿ, ಮಹಾಂತೇಶ ಹಂಪಿಹೊಳಿ,ತ್ರಿವೇಣಿ ಕರಿಗಾರ, ಸ್ವಾತಿ ದೇಶನೂರ, ಪೂಜಾ ಹೊಳಿ ಇತರರಿದ್ದರು.
Published on

ಬೆಳಗಾವಿ :

ಕೆಪಿಎಸ್‌ಸಿಯಲ್ಲಿ ನಡೆದಿರುವ ಹಗರಣಗಳ ತನಿಖೆಗೆ ಉನ್ನತಮಟ್ಟದ ತನಿಖಾ ಸಂಸ್ಥೆ ರಚಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪೊಲೀಸ್ ಕಾನ್‌ಸ್ಟೆಬಲ್ ಪರೀಕ್ಷೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಸಮಸ್ಯೆಗೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಸಹ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈಚೆಗೆ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಪಶುವೈದ್ಯಾಧಿಕಾರಿ ನೇಮಕಾತಿಗಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆ ಫಲಿತಾಂಶದಲ್ಲಿ ಅಕ್ರಮ ನಡೆದಿರುವುದು ಬಯಲಾಗಿದೆ. ಒಂದು ಹುದ್ದೆಗೆ ಇಂತಿಷ್ಟು ಹಣ ಬೇಡಿಕೆ ಇಟ್ಟಿರುವ ಆರೋಪವೂ ಕೇಳಿ ಬಂದಿದೆ. ಕಷ್ಟಪಟ್ಟು ಪರೀಕ್ಷೆ ಬರೆದ ಪ್ರತಿಭಾವಂತ ಅಭ್ಯರ್ಥಿಗಳು 300 ಅಂಕ ದಾಟಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಹಣ ಕೊಟ್ಟವರು ಮೆರಿಟ್ ಲಿಸ್ಟ್‌ನಲ್ಲಿ ಜಾಗ ಪಡೆದಿದ್ದಾರೆ. ಪದೇ ಪದೇ ಕೆಪಿಎಸ್‌ಸಿ ವಿರುದ್ಧ ಒಂದಿಲ್ಲೊಂದು ಆರೋಪಗಳು ಕೇಳಿ ಬರುತ್ತಿದ್ದು, ಉನ್ನತಮಟ್ಟದ ತನಿಖೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಇದರ ಪರಿಣಾಮ ಈಚೆಗೆ 450 ಶಾಲಾ-ಕಾಲೇಜ್‌ಗಳಲ್ಲಿ ಶೂನ್ಯ ಪ್ರವೇಶಾತಿ ದಾಖಲಾಗಿದೆ. ಹೀಗಾಗಿ, ಆದಷ್ಟು ಬೇಗ ಖಾಲಿ ಇರುವ ಹುದ್ದೆಗಳನ್ನು ಭರ್ತೀ ಮಾಡಿಕೊಂಡಲ್ಲಿ ಸರ್ಕಾರಿ ಶಿಕ್ಷಣ ವ್ಯವಸ್ಥೆ ಉಳಿಸಿದಂತಾಗುತ್ತದೆ ಎಂದು ಒತ್ತಾಯಿಸಿದರು.
ಪ್ರಥಮ ಪಾಟೀಲ, ಆದರ್ಶ ಉದೋಶಿ, ಮಹಾಂತೇಶ ಹಂಪಿಹೊಳಿ, ದರ್ಶನ ವಡ್ಡರಳ್ಳಿ ಪ್ರಥಮೇಶ ಅಷ್ಟಗಿ, ತ್ರಿವೇಣಿ ಕರಿಗಾರ, ಸ್ವಾತಿ ದೇಶನೂರ, ಪೂಜಾ ಹೊಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net