ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ವಿಪತ್ತು ಪರಿಹಾರ ಮೊತ್ತ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸೋಮವಾರ ಭಾರತೀಯ ಕೃಷಿಕ ಸಮಾಜ ಕೈಗೊಂಡ ಪ್ರತಿಭಟನೆಯಲ್ಲಿ ಸಿದಗೌಡ ಮೋದಗಿ, ಸಂಜೀವ ಡೊಂಗರಗಾವಿ, ಮಲ್ಲನಗೌಡ ಪಾಟೀಲ, ಭರಮಣ್ಣ ಅಣ್ಣಿಗೇರಿ, ಮಲ್ಲಿಕಾರ್ಜುನ ಬಿಳಗಿ ಇತರರಿದ್ದರು.
ವಿಪತ್ತು ಪರಿಹಾರ ಮೊತ್ತ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಸೋಮವಾರ ಭಾರತೀಯ ಕೃಷಿಕ ಸಮಾಜ ಕೈಗೊಂಡ ಪ್ರತಿಭಟನೆಯಲ್ಲಿ ಸಿದಗೌಡ ಮೋದಗಿ, ಸಂಜೀವ ಡೊಂಗರಗಾವಿ, ಮಲ್ಲನಗೌಡ ಪಾಟೀಲ, ಭರಮಣ್ಣ ಅಣ್ಣಿಗೇರಿ, ಮಲ್ಲಿಕಾರ್ಜುನ ಬಿಳಗಿ ಇತರರಿದ್ದರು.
Published on
 ಬೆಳಗಾವಿ :  ಕೃಷಿ ವಲಯದ ಬೀಜ, ಗೊಬ್ಬರ, ಡಿಸೇಲ್ ಕೊರತೆ ನಿಗಿಸಬೇಕು ಹಾಗೂ ರಾಷ್ಟ್ರೀಯ, ರಾಜ್ಯ ವಿಪತ್ತು ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಸೋಮವಾರ ಭಾರತೀಯ ಕೃಷಿಕ ಸಮಾಜದದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ರೈತರು, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಪ್ರತಿಭಟನೆ ಕೈಗೊಂಡು, ತಮ್ಮ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. 
ಯುದ್ಧಗಳ ಕಾರಣಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಡಿಸೇಲ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಕುರಿತು ಸರ್ಕಾರವೇ ಹೇಳುತ್ತಿರುವುದರಿಂದ  ಈ ವರ್ಷ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು. ಈಚೆಗೆ ಸುರಿದ ಮಳೆಗೆ ನಷ್ಟವಾದ ತೋಟಗಾರಿಕಾ ಬೆಳೆಹಾನಿ ಸರ್ವೆ ಆರಂಭಿಸಬೇಕು. ಬಿತ್ತನೆ ಬೀಜ, ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿ, ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಹಿಡಿಯಬೇಕು. ತಪ್ಪಿತಸ್ಥ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ನಷ್ಟವನ್ನು ಅವರಿಂದಲೇ ಭರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಬಿಮಾ(ವಿಮಾ) ಯೋಜನೆ ಅಡಿ ಮುಂಗಾರು ಹಂಗಾಮಿನ ಬೆಳೆ ಕಟಾವು ಪ್ರಯೋಗಗಳನ್ನು ಬೆಳೆವಾರು ವಿಮೆ ಕಂತು ಪಾವತಿಸಿದ ರೈತರಿಗೆ ಸಾರ್ವಜನಿಕ ಪ್ರದರ್ಶನಕ್ಕೊಳಪಡಿಸಬೇಕು. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಜಿಲ್ಲಾ ಪರಿಹಾರ ಕುಂದು ಕೊರತೆ ನಿವಾರಣಾ ಸಮಿತಿ ರಚನೆಯಾಗಬೇಕು. ಪಶ್ಚಿಮಘಟ್ಟ ಅರಣ್ಯವಾಸಿ ರೈತರಿಗೆ ವನ್ಯ ಪ್ರಾಣಿಗಳಿಂದಾದ ಬೆಳೆನಷ್ಟ, ಪ್ರಾಣಹಾನಿ ಪರಿಹಾರ ಹಾಗೂ ಚಿಕಿತ್ಸಾ ವೆಚ್ಚದ ಮೊತ್ತಗಳನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. 
ಸಂಘಟನೆ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ, ಸಂಜೀವ ಡೊಂಗರಗಾವಿ, ಭರಮಣ್ಣ ಅಣ್ಣಿಗೇರಿ, ಮಲ್ಲಿಕಾರ್ಜುನ ಬಿಳಗಿ, ಮಲ್ಲನಗೌಡ ಪಾಟೀಲ, ಶಿವಶಂಕರ ಪೂಜಾರ, ಶೇಖರ ಅಕ್ಕನ್ನವರ, ರಮೇಶ ಹಮ್ಮನ್ನವರ, ಅರ್ಜುನ ಗಾವಡಾ, ಈರಪ್ಪಾ ಲಖಮೋಜಿ, ಅಡಿವೆಪ್ಪ ಕರಮಳನ್ನವರ, ಮಲ್ಲಿಕಾರ್ಜುನ ಮೂಗಪ್ಪನವರ, ಗೀತಾ ಧರೆಣ್ಣವರ, ಶಿವಲೀಲಾ ಮಿಸಾಳೆ, ಈರಪ್ಪಾ ಪಟ್ಟಿಹಾಳ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net