ಶಿಕ್ಷಕರ ಖಾಲಿ ಹುದ್ದೆ ಭರ್ತಿಗೆ ಆಗ್ರಹ

ನಿಪ್ಪಾಣಿ ಪಟ್ಟಣದ ಅನುದಾನಿತ ಪ್ರೌಢಶಾಲೆಗಳಿಗೆ ಕಂಪ್ಯೂಟರ್, ಸ್ಕಾೃನರ್, ಪ್ರಿಂಟರ್ ವಿತರಣಾ ಕಾರ್ಯಕ್ಕೆ ಹಣಮಂತ ನಿರಾಣಿ ಚಾಲನೆ ನೀಡಿದರು. ರಾಜೇಂದ್ರ ಗುಂದೇಶಾ, ಸುನೀಲ ಪಾಟೀಲ, ರಾಮು ಗುಗವಾಡ, ಆದಮ್ ಅಲಿ ಪೀರಜಾದೆ ಇತರರಿದ್ದರು.
ನಿಪ್ಪಾಣಿ ಪಟ್ಟಣದ ಅನುದಾನಿತ ಪ್ರೌಢಶಾಲೆಗಳಿಗೆ ಕಂಪ್ಯೂಟರ್, ಸ್ಕಾೃನರ್, ಪ್ರಿಂಟರ್ ವಿತರಣಾ ಕಾರ್ಯಕ್ಕೆ ಹಣಮಂತ ನಿರಾಣಿ ಚಾಲನೆ ನೀಡಿದರು. ರಾಜೇಂದ್ರ ಗುಂದೇಶಾ, ಸುನೀಲ ಪಾಟೀಲ, ರಾಮು ಗುಗವಾಡ, ಆದಮ್ ಅಲಿ ಪೀರಜಾದೆ ಇತರರಿದ್ದರು.
Published on
ನಿಪ್ಪಾಣಿ: ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತ, ಸದನದಲ್ಲಿ ಧ್ವನಿ ಎತ್ತುವ ಕಾರ್ಯ ಮಾಡುತ್ತಿದ್ದೇನೆ. ಅನುದಾನಿತ ಶಾಲೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡುವಂತೆ ಶಿಕ್ಷಣ ಸಚಿವರಿಗೆ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದ್ದೇನೆ ಎಂದು ಪದವಿಧರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ನಗರದ ಬಸವಪ್ರಸಾದ ಜೊಲ್ಲೆ ಗಾರ್ಮೆಂಟ್‌ನಲ್ಲಿ ಈಚೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ತಾಲೂಕಿನ ಅನುದಾನಿತ 23 ಪ್ರೌಢಶಾಲೆಗಳಿಗೆ ಕಂಪ್ಯೂಟರ್, ಸ್ಕಾೃನರ್, ಪ್ರಿಂಟರ್ ವಿತರಿಸಿ ಮಾತನಾಡಿದರು.
ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘದ ಕಾರ್ಯಾಧ್ಯಕ್ಷ ರಾಮು ಗುಗವಾಡ ಮಾತನಾಡಿ, ತಾಲೂಕಿನ ಶ್ರೀಪೇವಾಡಿ ಗ್ರಾಮದ ಜಿ.ಎಂ.ಸಂಕಪಾಳ ಪ್ರೌಢಶಾಲೆಯಲ್ಲಿ ಈಚೆಗೆ ಗಣಕಯಂತ್ರ ಮತ್ತು ಇತರೆ ಸಾಮಗ್ರಿ ಬೆಂಕಿಗಾಹುತಿಯಾಗಿದ್ದವು. ಈ ಕುರಿತು ನಿರಾಣಿ ಅವರ ಗಮನಕ್ಕೆ ತಂದ ತಕ್ಷಣ ಅವರು 2 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಅಖಿಲ ಕರ್ನಾಟಕ ಅನುದಾನಿತ ಶಾಲಾ-ಕಾಲೇಜು ನೌಕರರ ಸಂಘದ ಅಧ್ಯಕ್ಷ ಆದಮ್ ಅಲಿ ಪೀರಜಾದೆ, ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಜಿನೇಂದ್ರ ನಿಲಜಗಿ, ತಾಲೂಕು ಅಧ್ಯಕ್ಷ ಸತೀಶ ಅರಭಾವಿ, ರಾವಸಾಹೇಬ ಜನವಾಡೆ, ನಾಮದೇವ ಕುಂಬಾರ, ಸ್ಥಳೀಯ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಸಂಚಾಲಕ ಜಯವಂತ ಭಾಟಲೆ, ರಾಜೇಂದ್ರ ಗುಂದೇಶಾ, ಸಂತೋಷ ಸಾಂಗಾವಕರ, ಸುನೀಲ ಪಾಟೀಲ, ಸುರೇಶ ಕಾಂಬಳೆ, ಎಸ್.ಎಸ್.ಮಠದ, ಬಂಡಾ ಘೋರ್ಪಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net