ಕಾರ್ಖಾನೆ ವಿರುದ್ಧ ಕ್ರಮಕ್ಕೆ ಒತ್ತಾಯ

ಬಾಳಿಗೆರೆ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರು ತಹಸೀಲ್ದಾರ್ ಸಿದ್ದರಾಯ ಭೋಸಗಿ ಅವರಿಗೆ ಮನವಿ ಸಲ್ಲಿಸಿದರು. ಪ್ರಕಾಶ ಪೂಜಾರಿ, ಮುದಕಪ್ಪ ಅರ್ಜುನಗಿ ಇತರರಿದ್ದರು.
ಬಾಳಿಗೆರೆ ಸಕ್ಕರೆ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರೈತರು ತಹಸೀಲ್ದಾರ್ ಸಿದ್ದರಾಯ ಭೋಸಗಿ ಅವರಿಗೆ ಮನವಿ ಸಲ್ಲಿಸಿದರು. ಪ್ರಕಾಶ ಪೂಜಾರಿ, ಮುದಕಪ್ಪ ಅರ್ಜುನಗಿ ಇತರರಿದ್ದರು.
Published on
ಸಂಬರಗಿ: ಬಾಳಿಗಿರಿಯಲ್ಲಿರುವ ಬಸವೇಶ್ವರ ಸಕ್ಕರೆ ಕಾರ್ಖಾನೆ ಕಲುಷಿತ ನೀರು ಹೊರಬಿಡುತ್ತಿರುವುದರಿಂದ ಸುತ್ತಮುತ್ತಲಿನ ಪ್ರದೇಶದ ಬೆಳೆಗಳಿಗೆ ಹಾನಿಯಾಗಿದೆ. ಆದ್ದರಿಂದ ಕಾರ್ಖಾನೆ ವಿರುದ್ಧ ಕ್ರಮ ಕೈಗೊಂಡು ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಕಾರ್ಖಾನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ರೈತ ಸಂಘದ ಸದಸ್ಯರು ತಹಸೀಲ್ದಾರ್ ಸಿದ್ದರಾಯ ಬೋಸಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಎರಡು ವರ್ಷಗಳಿಂದ ಕಾರ್ಖಾನೆ ಕಲುಷಿತ ನೀರನ್ನು ಹರಿಸುತ್ತಿರುವುದರಿಂದ ಭೂಮಿ ಕಲುಷಿತಗೊಂಡಿದೆ. ಇದರಿಂದ ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶದ ರೈತರ ಬಾವಿಗಳಲ್ಲಿನ ನೀರು ಕಲುಷಿತಗೊಂಡು ಬೆಳೆಗಳಿಗೆ ನೀರುಣಿಸದ ಸ್ಥಿತಿ ತಲುಪಿದ್ದು, ಕೆಟ್ಟ ವಾಸನೆ ಹೊರಸೂಸುತ್ತಿದೆ. ಸಮಸ್ಯೆ ಸರಿಪಡಿಸುವಂತೆ ಕಾರ್ಖಾನೆ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ. ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ರೈತ ಸಂಘದ ಮುಖಂಡರಾದ ಪ್ರಕಾಶ ಪೂಜಾರಿ, ಮುದಕಪ್ಪ ಅರ್ಜುನಗಿ, ಅಣ್ಣಪ್ಪ ಹಳ್ಳೂರ, ಲಕ್ಷ್ಮಣ ಕೋಳಿ, ರಶೀದ್ ತಂಬೋಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net