ಪಾಲಿಕೆಯ 58ರ ಪೈಕಿ 55 ಸದ್ಯಸರು ಕನ್ನಡಿಗರೇ ಇದ್ದಾರೆ. ಅಲ್ಲದೆ, ಮೇಯರ್, ಉಪಮೇಯರ್ ಕನ್ನಡ ಭಾಷಿಕರಾಗಿದ್ದು, ಕನ್ನಡ ಪರ ನಿರ್ಣಯ ಕೈಗೊಂಡು ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ಗೆ ಕಳುಹಿಸಬೇಕು. ಇದರಲ್ಲಿ ವಿಳಂಬ ಮಾಡಬಾರದು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ, ಮಹಾದೇವ ತಳವಾರ, ಶ್ರೀನಿವಾಸ ತಾಳೂರಕರ್ ಒತ್ತಾಯಿಸಿದ್ದಾರೆ.