ಕರ್ನಾಟಕ ಸರ್ಕಾರ 2017ರಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳ ರಾಜ್ಯ ನೀತಿ ರೂಪಿಸಿದೆ. ಇದರಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಪೂರ್ಣ ನಾಗರಿಕರಾಗಿ ಒಳಗೊಳ್ಳಲು, ಲಿಂಗತ್ವವನ್ನು ಸ್ವಯಂ ಗುರುತಿಸುವ ವ್ಯವಸ್ಥೆ ಒದಗಿಸುವುದಾಗಿ ಮತ್ತು ಲಿಂಗತ್ವದ ಆಧಾರದ ಮೇಲೆ ತಾರತಮ್ಯಕ್ಕೊಳಗಾಗದ ಹಕ್ಕು, ಸಾಮಾಜಿಕ ಸ್ಥಳ ಮತ್ತು ಸಂಪನ್ಮೂಲಗಳಿಗೆ ಪ್ರವೇಶ ಹಾಗೂ ಅಭಿವ್ಯಕ್ತಿ ಸ್ವಾತಂತ್ರ$್ಯ ಸೇರಿದಂತೆ ಸಂವಿಧಾನಿಕ ಹಕ್ಕುಗಳನ್ನು ಅನುಭವಿಸಲು ಸಬಲೀಕರಿಸುವುದಾಗಿ ಭರವಸೆ ನೀಡಿತ್ತು. ಈಗ ಮಾಡಿರುವ ತಿದ್ದುಪಡಿ ರಾಜ್ಯದ ಈ ಲಿಂಗತ್ವ ಅಲ್ಪಸಂಖ್ಯಾತ ನೀತಿಯಲ್ಲಿ ಉಲ್ಲೆಖಿಸಿದ ತತ್ತ$$$್ವಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಚಿನ್ನು ತಳವಾರ, ಐನಾ ಶೇಖ್, ತಾನಾಜಿ ಸಾವಂತ, ಸಂಪತ ದೊಡಮನಿ ಇತರರಿದ್ದರು.